ಜಂತುಹುಳುವಿನಿಂದ  ಮಕ್ಕಳಿಗೆ ರಕ್ತಹೀನತೆ ಬಾಧಿತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.14: ಜಂತುಹುಳು ಬಾಧಿತ ಮಕ್ಕಳು ರಕ್ತಹೀನತೆ,ಅಪೌಷ್ಟಿಕತೆ ಜೊತೆಗೆ ದೈಹಿಕ ಮತ್ತು ಮಾನಸಿಕವಾಗಿ ದೌರ್ಬಲ್ಯರಾಗಿರುತ್ತಾರೆ.ಆದ್ದರಿಂದ ಅಂತಹ ಮಕ್ಕಳಿಗೆ ಆಲ್ಬೆಂಡಜಾಲ್ ಮಾತ್ರೆ ನೀಡುವುದರಿಂದ ಜಂತುಹುಳು ನಿವಾರಣೆಯಾಗಿ ಮಕ್ಕಳಲ್ಲಿ ಏಕಾಗ್ರತೆ ಬೆಳೆಯುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಡಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಕ್ಕಳಿಗೆ ಮಾತ್ರೆನೀಡಿ ಮಾತನಾಡಿದ ಅವರು ಪ್ರತಿ ವರ್ಷ ಫೆಬ್ರವರಿ ಹಾಗೂ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಈ ಮಾತ್ರೆಗಳನ್ನು ಶಾಲೆಯಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಾರೆ.1 ವರ್ಷ ದಿಂದ 19 ವರ್ಷದೊಳಗಿನ ಹಾಗೂ ಹದಿಹರೆಯದ ಮಕ್ಕಳು ಸೇವಿಸುವುದರಿಂದ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತೀರಿ ಎಂದು ಹೇಳುವುದರ ಜೊತೆಗೆ ಗರ್ಭಿಣಿ ಸ್ತ್ರೀಯರು ಈ ಮಾತ್ರೆಗಳನ್ನು ಸೇವಿಸಬಾರದೆಂದರು.
ಇಂಗ್ಲಿಷ್ ಶಿಕ್ಷಕರಾದ ಉಮ್ಮೆಹಾನಿ, ರಾಮಾಂಜಿನೇಯ, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ, ಆಶಾ ಕಾರ್ಯಕರ್ತೆಯರಾದ ಯಶೋಧ, ಸುಶೀಲಾ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.