ಜಂತುಹುಳುವಿಗೆ ಮನೆಮದ್ದು

೧. ಸಿಹಿಗುಂಬಳದ ಹಸಿಬೀಜವನ್ನು ಜಜ್ಜಿ ರಸ ತೆಗೆದು ಕುಡಿದರೆ ಹುಳಗಳೆಲ್ಲಾ ಮಲದ ಮುಖಾಂತರ ಹೊರಟುಹೋಗುತ್ತವೆ.
೨. ನುಗ್ಗೇಕಾಯಿಯ ಹೂವನ್ನು ಜಜ್ಜಿ ರಸ ತೆಗೆದು ಕುಡಿದರೆ ಜಂತುಹುಳುಗಳು ಸಾಯುತ್ತವೆ.
೩. ಪರಂಗಿ ಹಣ್ಣಿನ ೨೦ ರಿಂದ ೩೦ರವರೆಗೆ ಬೀಜಗಳನ್ನು ನುಂಗುವುದರಿಂದ ಜಂತುಹುಳುಗಳು ನಾಶವಾಗುತ್ತವೆ.(೩ ರಿಂದ ೫ ದಿನ )
೪. ಕಡಲೆಕಾಳು ಗಾತ್ರದ ಇಂಗನ್ನು ಬೇವಿನ ಸೊಪ್ಪಿನ ರಸದಲ್ಲಿ ಸೇರಿಸಿ ಸೇವಿಸಿದರೆ ಮಲದೊಂದಿಗೆ ಜಂತುಹುಳುಗಳು ಬೀಳುವುವು.
೫. ಪರಂಗಿ ಹಣ್ಣಿನ ಬೀಜವನ್ನು ೨ ಚಮಚದಷ್ಟು ಹಾಗೆಯೇ ನುಂಗಿದರೆ ಅಥವಾ ಬೀಜವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಸಕ್ಕರೆ ಸೇರಿಸಿ ಸೇವಿಸಿದರೆ ಜಂತುಹುಳುಗಳು ಕಡಿಮೆಯಾಗುತ್ತವೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧