ಜಂತುಹುಳುಬಾಧೆ ನಿವಾರಣಾ, ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಿ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.೨೭; ರಾಷ್ಟ್ರೀಯ ಜಂತುಹುಳು ಬಾದೆ ನಿವಾರಣಾ ಕಾರ್ಯಕ್ರಮ ಮತ್ತು ಪಲ್ಸ್  ಪೋಲಿಯೋ   ಕಾರ್ಯಕ್ರಮ ಯಶಸ್ವಿ ಗೊಳಿಸಲು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕರೆ ನೀಡಿದರು.ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಗೋಡಬನಾಳ್ ಮತ್ತು ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಒಟ್ಟು 17 ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ ಸದಸ್ಯರಿಗೆ ವಿಶ್ವಾಸ್ ಆಂದೋಲನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿ ಅನುಷ್ಟಾನಕ್ಕೆ ಗ್ರಾಮ ಅರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿಗಳು ಚಟುವಟಿಕೆ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಕ್ತ ನಿಧಿಗಳ ಬಳಕೆ ಗ್ರಾಮ ಆರೋಗ್ಯ ಸಮಸ್ಯೆ ಬಗೆಹರಿಸುವಲ್ಲಿ ಸಭೆ ಚರ್ಚೆಗಳನ್ನು ಮಾಡಿ ರಾಷ್ಟ್ರೀಯ ಜಂತುಹುಳು ಬಾದೆ ನಿವಾರಣಾ ಕಾರ್ಯಕ್ರಮ ಮತ್ತು ಪಲ್ಸ್  ಪೋಲಿಯೋ   ಕಾರ್ಯಕ್ರಮ ಯಶಸ್ವಿ ಗೊಳಿಸಲು ಸಮುದಾಯದ ಸಹಭಾಗಿತ್ವಕ್ಕೆ ಸಹಕರಿಸಿ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ ಸದಸ್ಯರು ಗ್ರಾಮದ ಆರೋಗ್ಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಭೆಗಳಲ್ಲಿ ಚರ್ಚಿಸಿ ನಿರ್ಧಾರಗಳನ್ನು ಕೈಗೊಂಡ ನಡಾವಳಿಗಳನ್ನು ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಮೂಲಕ ಮುಕ್ತ ನಿಧಿಗಳ ಬಳಕೆ ಮಾಡಬಹುದು ಎಂದು ತಿಳಿಸಿದರು.