ಜಂಟಿ ಸಂಸದೀಯ ಸಮಿತಿ ಮುಂದೆ ಕ್ಷಮೆಯಾಚಿಸಿದ ಟ್ವಿಟರ್

ನವದೆಹಲಿ. ನವೆಂಬರ್ ೧೯. ಲಡಾಕ್ ಭೂಪ್ರದೇಶವನ್ನು ಚೀನಾದ ವಿಭಾಗವೆಂದು ತಪ್ಪಾಗಿ ತೋರಿಸುವುದಕ್ಕೆ ಸಾಮಾಜಿಕ ಮಾಧ್ಯಮ ಅಮೆರಿಕ ಮೂಲದ ಟ್ವಿಟರ್ ಸಂಸ್ಥೆ , ಜಂಟಿ ಸಂಸದೀಯ ಸಮಿತಿ ಎದುರು ಕ್ಷಮೆ ಯಾಚಿಸಿದೆ.

ಈ ಸಂಬಂಧ ಸಮಿತಿಗೆ ಲಿಖಿತ ಹೇಳಿಕೆ ನೀಡಿರುವ ಟ್ವಿಟರ್, ಈ ತಿಂಗಳ ಅಂತ್ಯದ ವೇಳೆಗೆ ಆಗಿರುವ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.

ಜಂಟಿ ಸಂಸದೀಯ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಲೇಖಿ ಅವರು ಹೇಳಿದ್ದು, ಟ್ವಿಟರ್ ಇಂಡಿಯಾ ಹಿರಿಯ ಅಧಿಕಾರಿ ಡೇ ಮಿಯನ್ ಕರಿಯನ್ ಅವರು ಸಹಿ ಮಾಡಿರುವ ಪ್ರಮಾಣಪತ್ರವನ್ನು ಸಮಿತಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಡಾಕ್ ಪ್ರದೇಶವನ್ನು ಚೀನಾದ ಭೂಭಾಗ ವೆಂದು ತೋರಿಸಿದ ತಪ್ಪಿಗಾಗಿ ಸಂಸತ್ತಿನ ದತ್ತಾಂಶ ಸಂರಕ್ಷಣಾ ಸಮಿತಿ ಕಳೆದ ತಿಂಗಳು ಟ್ವಿಟರ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ದೇಶದ್ರೋಹ ಕೃತ್ಯವಾಗಿದೆ. ಇದಕ್ಕೆ ಸೂಕ್ತ ವಿವರಣೆ ನೀಡಬೇಕೆಂದು ಟ್ವಿಟರ್ ಸಂಸ್ಥೆಗೆ ಸೂಚನೆ ನೀಡಲಾಗಿತ್ತು.

ಜಂಟಿ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ಪೀಟರ್ ಇಂಡಿಯಾದ ಪ್ರತಿನಿಧಿಗಳು ಕ್ಷಮೆ ಕೋರಿದರು. ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಹ ಕ್ರಿಮಿನಲ್ ಅಪರಾಧ ಇದಾಗಿದೆ . ಆದ್ದರಿಂದ ಸಂಸ್ಥೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಆದೇಶಿಸಲಾಗಿತ್ತು.

ಇದರನ್ವಯ ಅಮೆರಿಕದ ಟ್ವಿಟರ್ ಸಂಸ್ಥೆ ಜಂಟಿ ಸಂಸದೀಯ ಸಮಿತಿ ಮುಂದೆ ಪ್ರಮಾಣ ಪತ್ರ ಸಲ್ಲಿಸಿ ಲಿಖಿತ ಕ್ಷಮೆ ಯಾಚಿಸಿದೆ.

ಲಡಾಕ್ ಪ್ರದೇಶವನ್ನು ಚೀನಾದ ಭೂ ಭಾಗವೆಂದು ತೋರಿಸಿ ಭಾರತೀಯರ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದೆ ಇದಕ್ಕಾಗಿ ಅವರು ಕ್ಷಮೆ ಕೋರಿದ್ದಾರೆ ಅಲ್ಲದೆ ಈ ತಿಂಗಳ ಅಂತ್ಯದೊಳಗೆ ಆಗಿರುವ ಲೋಪದೋಷವನ್ನು ಸರಿಪಡಿಸಿಕೊಳ್ಳುವುದು ಭರವಸೆ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಭಾರತದ ಸಮಗ್ರತೆ ಹಾಗೂ ಭದ್ರತೆ ವಿಚಾರದಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಸದಾ ಕಾಪಾಡಿಕೊಳ್ಳಲಿದೆ ಎಂದು ಮೀನಾಕ್ಷಿ ಲೇಖಿ ಅವರು ತಿಳಿಸಿದ್ದಾರೆ.