ಜಂಟಿ ನಿರ್ದೇಶಕರಿಂದ ಹಣ್ಣು ಮತ್ತು ತರಕಾರಿ ಮಳಿಗೆ ಉದ್ಘಾಟನೆ

ಕಲಬುರಗಿ,ಫೆ,10:ರೈತರ ತೋಟದಿಂದ ನೇರವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ನಗರವಾಸಿಗಳಿಗೆ ಮಾರುಕಟ್ಟೆಗಿಂತ ಸೂಕ್ತ ಬೆಲೆಯಲ್ಲಿ ಸರಬರಾಜು ಮಾಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಜಿಲ್ಲಾ ತೋಟಗಾರಿಕೆ ಹುಟ್ಟುವಳಿ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ (ನಿ), ಕಲಬುರಗಿ ಮತ್ತು ಯಾದಗಿರಿ (ಜಿಲ್ಲಾ ಹಾಪ್‍ಕಾಮ್ಸ್ ಕಲಬುರಗಿ ಮತ್ತು ಯಾದಗಿರಿ) ಸಂಘದ ವತಿಯಿಂದ ಕಲಬುರಗಿ ನಗರದ ಐವಾನ್ ಶಾಹಿ ರಸ್ತೆ ಪಕ್ಕದಲ್ಲಿರುವ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಯನ್ನು ಕಲಬುರಗಿ ವಿಭಾಗದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪೂರ ಅವರು ಉದ್ಘಾಟಿಸಿದರು.
ತೋಟಗಾರಿಕೆ ಕಲಬುರಗಿ (ಜಿ.ಪಂ.) ಉಪ ನಿರ್ದೇಶಕರು ಹಾಗೂ ಅಧ್ಯಕ್ಷ ಗುರುಶಾಂತ ವ್ಹಿ. ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಪರಮೇಶ್ವರ ಶೀಖರೆ ಹಾಗೂ ಸಂಘದ ಇತರೆ ನಿರ್ದೇಶಕರು ಉಪಸ್ಥಿತರಿದ್ದರು.