ಜಂಗಮ ಸಮಾಜದ ತಾ.ಅಧ್ಯಕ್ಷ ಬಿಎಂ ಸಿದ್ದಲಿಂಗಯ್ಯ ನಿಧನ

ಹಗರಿಬೊಮ್ಮನಹಳ್ಳಿ.ಮೇ.೨೧ ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಬಿಎಂ ಸಿದ್ದಲಿಂಗಯ್ಯ(55) ಅನಾರೋಗ್ಯದಿಂದ ಇಂದು ಬೆಳಗಿನ ಜಾವ ನಿಧನರಾಗಿ ರುತ್ತಾರೆ.
ಪಟ್ಟಣದ ನಿವಾಸಿಯಾಗಿದ್ದು ಇವರು ರಾಜಕೀಯ ಮತ್ತು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ದಿವಂಗತ ಎಂ ಪಿ ಪ್ರಕಾಶ್ ಅವರ ಅನುಯಾಯಿಯಾಗಿದ್ದು. ಎಂಪಿ ರವೀಂದ್ರ ಇವರಿಗೆ ಆತ್ಮೀಯರಾಗಿದ್ದರು. ಇವರ ನಿಧನಕ್ಕೆ ತಾಲೂಕಿನ ಬೇಡ ಜಂಗಮ ಸಮಾಜ ಸಂತಾಪ ಸೂಚಿಸಿದೆ. ಇವರು ಅಪಾರ ಬಂಧುಗಳು ಮತ್ತು ಇಬ್ಬರು ಪುತ್ರಿಯರು ಒಬ್ಬ ಪುತ್ರನನ್ನು ಅಗಲಿದ್ದಾರೆ