ಬೀದರ್:ಸೆ.25: ಭಾನುವಾರ ಸಂಜೆ ನಗರದ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಇರುವ ಶ್ರೀ ವೀರಭದ್ರೇಶ್ವರ ಸಂಕೀರ್ಣ ಆವರಣದಲ್ಲಿ ಇತ್ತೀಚಿಗೆ ಸೋನಿ ಎಂಟರ್ಟೈನ್ಮೆಂಟ್ ಚಾನಲ್ನಲ್ಲಿ ಇಂಡಿಯನ್ ಐಡಲ್ ಎಡಿಶನ್ ಗೆ ಆಯ್ಕೆಯಾದ ಯುವ ಗಾನ ಕೋಗಿಲೆ ಎಂದೇ ಹೆಸರುವಾಸಿಯಾಗಿರುವ ಕು. ಶಿವಾನಿ ಸ್ವಾಮಿಗೆ ಜಿಲ್ಲಾ ಜಂಗಮ ಸಮಾಜ ಹಾಗೂ ಶ್ರೀ ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕು. ಶಿವಾನಿ, ಅಕ್ಟೋಬರ್ ಏಳು ಹಾಗೂ ಎಂಟರಂದು ಎರಡು ದಿನ ಸೋನಿ ಟಿವಿಯಲ್ಲಿ ನನ್ನ ಐಡಲ್ ಅಡಿಷನ್ ಕಾರ್ಯಕ್ರಮ ಬರಲಿದ್ದು ಜಿಲ್ಲೆಯ ನನ್ನೆಲ್ಲಾ ಸಮಾಜ ಬಾಂಧವರು ತಪ್ಪದೇ ಆ ಚಾನಲ್ ಅನ್ನು ವೀಕ್ಷಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾಕುಳಗಿ ಶ್ರೀಗಳು ಶ್ರೀ ರೇಣುಕಾ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ್ವರ ಸ್ವಾಮಿ, ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪುರ, ನಿರ್ದೇಶಕರಾದ ಪ್ರಭುಲಿಂಗ ಸ್ವಾಮಿ, ಮರುಳಾರಾದ್ಯ ಚಿಟ್ಟಾ, ಸಂತೋಷ ಸ್ವಾಮಿ, ಜ್ಯೋತಿ ಜೈಶ್ರೀ, ಜೈ ಶಂಕರ ಶೇಷಾದ್ರಿ, ಕಾರ್ತಿಕ ಮಠಪತಿ, ಶಿವಾನಿ ಸ್ವಾಮಿಯ ಪೆÇೀಷಕರಾದ ಶಿವದಾಸ ಸ್ವಾಮಿ, ಕವಿತಾ ಸ್ವಾಮಿ ಸೇರಿದಂತೆ ಅಪಾರ ಜಂಗಮ ಬಾಂಧವರು ಈ ಸಂದರ್ಭದಲ್ಲಿ ಹಾಜರಿದ್ದರು.