ಜಂಗಮಸೋವೇನಹಳ್ಳಿ :ಕಾರ್ತಿಕೋತ್ಸವ

ಕೂಡ್ಲಿಗಿ.ಡಿ.22:-ತಾಲೂಕಿನ ಜಂಗಮಸೋವೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀ ಗುರು ಬಸವೇಶ್ವರ ಸ್ವಾಮಿ ಕಾರ್ತೀಕೋತ್ಸವವನ್ನು ದೇವಸ್ಥಾನದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಸಾಲು ದೀಪಗಳ ಬೆಳಗಿಸುವುದರ ಮುಖಾಂತರ ಕಾರ್ತೀಕೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು
ನಂತರ ಮ್ಯಾಳ ಸಮಾಳಗಳ ಮಂಗಳವಾದ್ಯಗಳೊಂದಿಗೆ ಗ್ರಾಮದ ಸುಮಂಗಲಿಯರು ಭಕ್ತಿಗೌರವಗಳೊಂದಿಗೆ ಪಲ್ಲಕ್ಕಿಯಲ್ಲಿ ಕರೆದೊಯ್ದು ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಹಾಗೂ ಶ್ರೀವೀರಭದ್ರೇಶ್ವರ ಸ್ವಾಮಿ ದೇವರಗಳನ್ನು ದೇವಸ್ಥಾನದ ಮುಂಬಾಗಲ್ಲಿ ಪ್ರತಿಷ್ಟಾಪಿಸ
ರಾತ್ರಿಯಿಡೀ ಜಾನಪದ ವಿವಿಧ ಕಲಾಪ್ರಕಾರಗಳ ನಂದಿದ್ವಜ ಸಮಾಳಗಳ ಮಾದಲ್ಸಿ ಮಂಗಳವಾದ್ಯ ಮೇಳ ಶ್ರೀ ವೀರಭದ್ರೇಶ್ವರ ಸ್ವಾಮಿಯ ವಡಪುಗಳು ಇನ್ನೂ ಮಂತಾದ ಕಾರ್ಯಗಳು ಭಕ್ತರ ಮನಸೂರೆಗೊಂಡವು ನಂತರ ಇಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗ್ರಾಮದ ವೀರಗಾಸೆ ತಂಡದವರಿಂದ ವೀರಗಾಸೆ ನೃತ್ಯ ನೋಡಗರನ್ನು ಮೂಕವಿಸ್ಮಿತರನ್ನಾಗಿಸಿತು
ಶೇಸ್ತ್ರಗಳನ್ನು ದೇಹದ ಕೆನ್ನೆ ನಾಲಿಗೆ ತುಟಿ ಗಂಟಲು ದೇಹದ ಇನ್ನಿತರ ಅಂಗಾಂಗಳಿಗೆ ಚುಚ್ಚಿ ಶೇಸ್ತ್ರಗಳ ಜೊತೆ ದಾರವನ್ನು ಎಳೆಯುವುದನ್ನು ನೋಡಿದರೆ ಶ್ರದ್ದಾಭಕ್ತಿ ಯಿಂದ ನಮಿಸಿ ಭಕ್ತಿ ಸಮರ್ಪಿಸಿ ಧನ್ಯತೆ ಮೆರೆದ ಸಂತೃಪ್ತ ಭಾವ ಭಕ್ತರಲ್ಲಿ ಮನೆ ಮಾಡಿತ್ತು ನಂತರ ವೀರಭದ್ರೇಶ್ವರ ಸ್ವಾಮಿಯನ್ನು ಗಂಗೆಗೆ ಹೋಗುವುದರ ಮುಖಾಂತರ ಸಂಪ್ರದಾಯಕವಾಗಿ ಸರಳವಾಗಿ ಕಾರ್ತೀಕೋತ್ಸವಕ್ಕೆ ಅಂತ್ಯ ಹಾಡಲಾಯಿತು.