ಜಂಗಮಸಮಾಜ ಸತ್ಯ,ಧರ್ಮ,ಪ್ರೇಮ,ಶಾಂತಿಯದ್ದು:ರಾಮಲಿಂಗಯ್ಯಶ್ರೀ

ತಾಳಿಕೋಟೆ:ಮಾ.9: ಬೇಡಜಂಗಮ ಸಮಾಜವೆನ್ನುವುದು ಇಂದಿಂದ್ದಲ್ಲ ಸೃಷ್ಟಿ ಎಂಬುದು ಜನ್ಮತಾಳಿದಾಗಿನಿಂದಲೂ ಇದೂ ಕೂಡ ಜನ್ಮತಾಳಿ ಬಂದಿದೆ ಎಂದು ತಾಳಿಕೋಟೆ ಬೇಡಜಂಗಮ ಸಮಾಜದ ಗೌರವಾಧ್ಯಕ್ಷರಾದ ಜೋತಿಷ್ಯರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ನುಡಿದರು.

     ಇತ್ತಿಚಿಗೆ ಪಟ್ಟಣದಲ್ಲಿ ಜಂಗಮ ಸಮಾಜದ ನೇತೃತ್ವದಲ್ಲಿ ಶ್ರೀ ರೇಣುಕಾಚಾರ್ಯರÀ ಜಯಂತ್ಯೋತ್ಸವ ಕುರಿತು ಎ.ಪಿ.ಎಂ.ಸಿ.ಸಭಾಭವನದಲ್ಲಿ ಏರ್ಪಡಿಸಲಾದ ರೇಣುಕಾಚಾರ್ಯರ ಮಹಾಮೂರ್ತಿಗೆ ಪುಷ್ಪಹಾರ ಹಾಕಿ ಗೌರವಿಸಿ ಮಾತನಾಡುತ್ತಿದ್ದ ಅವರು ಮಾನವ ಧರ್ಮಕ್ಕೆ ಜಯವಾಗಲಿ ಪಂಚಪೀಠಗಳೂ ಶಾಂತಿ ಮತ್ತು ಧರ್ಮೋದ್ದಾರ ಹಾಗೂ ದೇಶೊದ್ದಾರಕ್ಕಾಗಿ ಶ್ರಮಿಸುತ್ತ ಸಾಗಿವೆ. ರೇಣುಕಾಚಾರ್ಯರ ಆಶೀರ್ವಾದ ನಮ್ಮೆಲ್ಲರ ಮೇಲಿದೆ ಕಾರಣ ಈ ಜಯಂತ್ಯೋತ್ಸವದಿಂದಲೇ ನಮ್ಮೆಲ್ಲರ ಸಂಘಟನೆ ಬಲಗೊಳ್ಳುತ್ತ ಸಾಗಲಿದೆ ಎಂದರು. ಈಗಾಗಲೇ ಬೇಡಜಂಗಮ ಸಂಘಟನೆಗಾಗಿ ರಾಜ್ಯಾಧ್ಯಕ್ಷ ನ್ಯಾಯವಾದಿ ಬಿ.ಡಿ.ಹಿರೇಮಠ ಅವರ ಮಾರ್ಗದರ್ಶನದ ಮೇರೆಗೆ ಮುನ್ನಡೆಯಲಾಗಿದೆ. ಕಾರಣ ಎಲ್ಲ ನಮ್ಮ ಸಮಾಜ ಬಾಂಧವರು ಇನ್ನಷ್ಟು ಬಲ, ಶಕ್ತಿ, ಪ್ರೋತ್ಸಾಹಿಸುವ ಕಾರ್ಯ ನಿಮ್ಮದಾಗಬೇಕೆಂದು ಸಮಾಜಬಾಂಧವರಿಗೆ ತಿಳಿಹೇಳಿದರು.
     ಇನ್ನೋರ್ವ ಕೊಡೆಕಲ್ ದುರುದುಂಡೇಶ್ವರ ಮಠದ ಶ್ರೀ ಮ.ನಿ.ಪ.ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಇಂದು ರೇಣುಕಾಚಾರ್ಯ ಜಯಂತಿ ದಿನದಂದು ಅಸಂಖ್ಯಾತ ಸಮಾಜ ಬಾಂಧವರು ಕುಡಿರುವುದು ಹರ್ಷ ತಂದಿದೆ. ಈ ಕಾರ್ಯಕ್ಕೆ ಚಬನೂರಿನ ಶ್ರೀ ರಾಮಲಿಂಗ ಮಹಾಸ್ವಾಮಿಗಳ ಪ್ರಯತ್ನದ ಫಲವೇ ಕಾರಣವೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಎಂದು ಹೇಳಿದ ಶ್ರೀಗಳು ಅ¸ಂÀಖ್ಯಾತ ಶ್ರೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡಿರುವುದು ಸಂತಸದ ಸಂಗತಿ ಎಂದರು.
      ಇನ್ನೋರ್ವ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಅವರು ಮಾತನಾಡಿ ಜಂಗಮ ಸಮಾಜ ಒಳ್ಳೆಯ ಸಮಾಜ ಬಡಬಗ್ಗರ ಬಗ್ಗೆ ಕಾಳಜಿ ಉಳ್ಳವದ್ದಾಗಿದೆ. ಇಂತಹ ಗೌರವಾನ್ವಿತ ಸಮಾಜದ ಶಿಷ್ಯರು ನಾವಾಗಿದ್ದೇವೆ ಬೇಡಜಂಗಮ ಹಿತಕ್ಕಾಗಿ ಮಿಸಲಾತಿಗೆ ಒಗ್ಗಟ್ಟಿನಿಂದಲೇ ಬಲ ಎಂಬುದನ್ನು ಅರ್ಥೈಸಿ ಕೊಂಡ ಶ್ರೀ ರಾಮಲಿಂಗ ಮಹಾಸ್ವಾಮಿಗಳು ತಾಳಿಕೋಟಿ ಪಟ್ಟಣವಲ್ಲದೆ ಸುತ್ತಮುತ್ತಲಿನ ಗ್ರಾಮದಲ್ಲಿಯ ಸಮಾಜ ಬಾಂಧವರನ್ನು ಒಗ್ಗುಡಿಸಿರುವುದುಸಂತಸದ ಸಂಗತಿಯಾಗಿದ್ದರೂ ಈ ಸಮಾಜಕ್ಕೆ ಮಿಸಲಾತಿಗಾಗಿ ದೊರಕಿಸಿ ಕೊಡುವ ವ್ಯವಸ್ಥೆಗಾಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಗುರುವಿನ ಸ್ಥಾನಮಾನಕ್ಕೆ ಗೌರವ ನೀಡುವ ಕಾರ್ಯ ಇನ್ನೂ ಮಾಡುತ್ತಾ ಸಾಗುತ್ತೆನೆಂದರು.
          ಇನ್ನೋರ್ವ ಶಾಸಕ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆಯ ಇಲಾಖಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರು ಮಾತನಾಡಿ ಈ ಹಿಂದಿನಿಂದಲೂ ಜಂಗಮ ಸಮಾಜ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಬಡಬಗ್ಗರಿಗೆ ಆಶ್ರಯ ನೀಡುತ್ತಾ ಸಾಗಿಬಂದಂತಹ ಸಮಾಜ ಇದಾಗಿದೆ. ಈ ಸಮಾಜದ ಜನತೆ ಶಾಂತಿಪ್ರೀಯರು ಎಲ್ಲರಿಗೂ ಜಯವಾಗಲಿ ಸರ್ವೇಜನ ಸುಖಿನಾಬವಂತು ಎಂಬುದನ್ನು ಹೇಳುತ್ತಾ ಸಾಗಿಬಂದ ಸಮಾಜ ಇದಾಗಿದೆ ಎಂದು ಜಂಗಮ ಸಮಾಜ ಕುರಿತು ಗುಣಗಾನ ಮಾಡಿದರು.
         ಇನ್ನೋರ್ವ ಮಾಜಿ ಸಚಿವ ಅಪ್ಪಾಜಿ ನಾಡಗೌಡ ಅವರು ಮಾತನಾಡಿ ಜಂಗಮ ಸಮಾಜಕ್ಕೆ ಬೇಡ ಜಂಗಮ ಎಂಬುದನ್ನು ಮಿಸಲಾತಿ ಪಡೆಯಲೂ ಈ ಹಿಂದಿನಿಂದಲೂ ಹೋರಾಟ ಮಾಡುತ್ತ ಸಾಗಿಬರಲಾಗಿದೆ. ಸಂವಿಧಾನದಂತೆ ಕಾನೂನ ಪ್ರಕಾರ ಬೇಡ ಜಂಗಮವೆಂಬ ಮಿಸಲಾತಿಯನ್ನು ಸರ್ಕಾರ ಕೊಡಬೆಕೆಂದು ಹೇಳಿದ ನಾಡಗೌಡ ಅವರು ಜಂಗಮ ಸಮಾಜದ ಕುರಿತು ಬಹುಮಾರ್ಮಿಕವಾಗಿ ವಿವರಿಸಿದರು.
          ಇನ್ನೋರ್ವ ಕ.ರಾ.ಬೇಡಜಂಗಮ ಸಂಘಟನೆಯ ಮುಖಂಡ ನ್ಯಾಯವಾದಿ ಮಲ್ಲಿಕಾರ್ಜುನ ಬೃಂಗಿಮಠ ಅವರು ಮಾತನಾಡಿ ಬೇಡ ಜಂಗಮ ಸಮಾಜದವರ ಬಗ್ಗೆ ಕೆಲವು ಜನ ಶಾಸಕರು ಧ್ವನಿ ಎತ್ತಿದ್ದರೂ ಇನ್ನೂಕೆಲವು ಶಾಸಕರು ಧ್ವನಿ ಎತ್ತಿಲ್ಲ ಯಾರೂ ನಮ್ಮ ಸಮಾಜದ ಬಗ್ಗೆ ಧ್ವನಿ ಎತ್ತಿಲ್ಲವೋ ಅಂತವರನ್ನು ಚುನಾವಣೆಯಲ್ಲಿ ನಿರ್ಲಕ್ಷ ಭಾವನೆ ಹಾಗೂ ದೂರಿಕರಿಸುವ ಭಾವನೆ ನಮ್ಮದಾಗಿದೆ ಕಾರಣ ಇಂದಿನ ನಮ್ಮ ಜನಾಂಗದ ಸಂಘಟನೆಯನ್ನು ನೋಡಿ ಹರ್ಷದಾಯಕವಾಗಿದೆ. ನಮ್ಮ ಒಗ್ಗಟ್ಟು ಎಂಬುದು ಇದೇ ರೀತಿ ಮುಂದುವರೆಯಲೆಂದರು.
           ರಾಜ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಸುಜಾತಾ ಹಿರೇಮಠ, ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಸಮಾಜದ ಏಳಿಗೆ ಹಾಗೂ ಒಗ್ಗಟ್ಟಿನ ವಿಚಾರ ಕುರಿತು ಉಪಸ್ಥಿತ ಸಮಾಜ ಬಾಂಧವರಿಗೆ ಬಹು ಮಾರ್ಮಿಕವಾಗಿ ವಿವರಿಸಿದರಲ್ಲದೆ ಈ ಕಾರ್ಯಕ್ರಮದಲ್ಲಿ ಅಸಂಖ್ಯಾತ ಸುಮಂಗಲೇಯರು ಪಾಲ್ಗೋಂಡು ಕುಂಭಮೇಳದೊಂದಿಗೆ ಶ್ರೀ ರೆಣುಕಾಚಾರ್ಯರ ಮಹಾಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ಕರೆತಂದು ಮಹಾಪೂಜೆಗೈದಿರುವುದು ಸಂತಸದಾಯಕವಾಗಿದೆ ಎಂದರು.
            ಕಾರ್ಯಕ್ರಮದಲ್ಲಿ ಸಾಸನೂರ ಶ್ರೀಗಳು ಸಾನಿಧ್ಯ ವಹಿಸಿದ್ದರು. ತುಂಬಗಿ ಶ್ರೀಗಳು, ಸಾಸನೂರ, ದೇವರಹಿಪ್ಪರಗಿ, ಗುಳಬಾಳ ಶ್ರೀಗಳು, ಯಾಳವಾರ ಶ್ರೀಗಳು, ಕೊಕಟನೂರ ಕಂಠಿಮಠದ ಶ್ರೀಗಳು, ನಾವದಗಿ ಶ್ರೀಗಳನ್ನೊಳಗೊಂಡು ವಿವಿಧ ಗ್ರಾಮ ಪಟ್ಟಣಗಳ ಶ್ರೀಗಳು ಹಾಗೂ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಶ್ರೀ ರಾಜಶೇಕರ ಹಿರೇಮಠ, ಶ್ರೀಗುರು ಹಿರೇಮಠ, ಕುಮಾರಸ್ವಾಮಿ ಮಠ, ಶರಣಯ್ಯ ಹಿರೇಮಠ, ನಾಗೇಶ ಡೊಣುರಮಠ, ವೀರಯ್ಯ ಹಿರೇಮಠ, ದಮ್ಮೂರಮಠಸರ್, ರಾಜು ಹಿರೇಮಠ, ಸೊಮಶೇಕರ ಸರ್ ಮಿಣಜಗಿ, ಕಾಶೀನಾಥ ಸರ್ ಮಿಣಜಗಿ, ಮಲ್ಲು ಕೊಡಗಾನೂರ, ಕಾಶಿನಾಥ ಹೀರೆಮಠ, ಮೊದಲಾದವರೂ ಪಾಲ್ಗೋಂಡಿದ್ದರು.
      ನಾವದಗಿ ಹಿರೇಮಠದ ಶ್ರೀ ರಾಜೇಂದ್ರ ಒಡೆಯರ ಮಹಾಸ್ವಾಮಿಗಳು ಸ್ವಾಗತಿಸಿ ವಂದಿಸಿದರು.
            ಈ ಕಾರ್ಯಕ್ರಮಕ್ಕೆ ಮೊದಲು ರೇಣುಕಾಚಾರ್ಯರ ಮಹಾಮೂರ್ತಿಯ ಭವ್ಯಮೆರವಣಿಗೆಯಲ್ಲಿ ಪಾಲ್ಗೋಂಡ ವೀರಗಾಶಯರ ಹಾಗೂ ಪುರವಂತಿಗೆ ಸೇವೆ ಹಾಗೂ ಕರಡಿ ಮಜಲು ಇವು ನೋಡುಗರ ಜನಮನ ಸೆಳೆದವು.