
ಸಂಜೆವಾಣಿ ವಾರ್ತೆ
ಗಂಗಾವತಿ, ಏ.,02: ಚುನಾವಣಾ ಆಯೋಗದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚೆಕ್ ಪೊಸ್ಟ್ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗಳು ಕೂಲಂಕುಷವಾಗಿ ವಾಹನಗಳ ತಪಾಸಣೆ ನಡೆಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ತಾಲೂಕಿನ ಜಂಗಮರ್ ಕಲ್ಗುಡಿ ಗ್ರಾಮದ ಚೆಕ್ ಪೊಸ್ಟ್ ಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು.
ಚೆಕ್ ಪೊಸ್ಟ್ ನಲ್ಲಿ ಕುಡಿವ ನೀರು, ಬೆಳಕಿನ ವ್ಯವಸ್ಥೆ ಸೇರಿ ಇತರೆ ಸೌಲಭ್ಯ ಕಲ್ಪಿಸಲಾಗಿದೆ. ಗಂಗಾವತಿ-ಕಾರಟಗಿ ಹಾಗೂ ಕಾರಟಗಿ– ಗಂಗಾವತಿ ಮಾರ್ಗದಲ್ಲಿ ಸಂಚರಿಸುವ ಕಾರ್, ಗೂಡ್ಸ್ ವಾಹನ, ಟಾಟಾ ಏಸ್ ಸೇರಿ ಇತರೆ ಅನುಮಾನಸ್ಪದ ವಾಹನಗಳ ತಪಾಸಣೆ ಮಾಡಬೇಕು. ನೀತಿ ಸಂಹಿತಿ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಚೆಕ್ ಪೊಸ್ಟ್ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರಾಮುನಾಯ್ಕ್, ತೋಟಗಾರಿಕೆ ಇಲಾಖೆ ಎಎಚ್ಓ ರೇವಣಪ್ಪ, ಪೊಲೀಸ್ ಪೇದೆಗಳಾದ ಅಮರೇಶ, ದೇವೇಂದ್ರ, ತಾಪಂ ಸಿಬ್ಬಂದಿಗಳಾದ ಭೀಮಣ್ಣ, ಶರಣಬಸಪ್ಪ, ಬಸವರಾಜ ಜಟಗಿ, ಬಾಳಪ್ಪ ತಾಳಕೇರಿ, ಮಲ್ಲಿಕಾರ್ಜುನ, ಗ್ರಾಪಂ ಕಾರ್ಯದರ್ಶಿಗಳಾದ ಪ್ರಭುರಾಜ ಪಾಟೀಲ್, ಗ್ರಾಪಂ ಸಿಬ್ಬಂದಿ ಮಹಾಂತೇಶ ಇದ್ದರು.