
ಸಂಜೆವಾಣಿ ವಾರ್ತೆ
ಗಂಗಾವತಿ, ಜು.06: ತಾಲೂಕಿನ ಜಂಗಮರ್ ಕಲ್ಗುಡಿ ಗ್ರಾಮದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ ಆರೋಗ್ಯ ಶಿಬಿರ ನಡೆಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಮಾತನಾಡಿ, ನಾವು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರುತ್ತಾರೆ. ಹೀಗಾಗಿ ಆರೋಗ್ಯ ಜಾಗೃತಿ ಮೂಡಿಸಲು ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಬಡ ಜನರಿಗೆ ಶಿಬಿರ ತುಂಬಾ ಅನುಕೂಲ ಆಗಲಿದೆ. ಯಾರೂ ಕೂಡ ಹಿಂಜರಿಯದೆ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಭಿವೃದ್ಧಿ ಅಧಿಕಾರಿ ರಾಮು ನಾಯಕ್ ಅವರು ಮಾತನಾಡಿ, ಆರೋಗ್ಯವೇ ಮಹಾಭಾಗ್ಯವಾಗಿದ್ದು, ಎಲ್ಲ ಕೂಲಿಕಾರರು ಶಿಬಿರದ ಸೌಲಭ್ಯ ಪಡೆಯಬೇಕು. ತಪಾಸಣೆಗೆ ಯಾರು ಹಿಂದೇಟು ಹಾಕಬಾರದು ಎಂದರು. ಶಿಬಿರದಲ್ಲಿ 110 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ವೇಳೆ ಗ್ರಾಪಂ ಅಧ್ಯಕ್ಷರಾದ ಶ್ರುತಿ ಧನಂಜಯ್, ಉಪಾಧ್ಯಕ್ಷರಾದ ಹುಲಿಗೆಮ್ಮ, ಸದಸ್ಯರರಾದ ಮೈಲಾಪುರ ದೊಡ್ಡಪ್ಪ, ಕನಕರಾಜ, ಕಾರ್ಯದರ್ಶಿಗಳಾದ ಪ್ರಭುರಾಜ ಪಾಟೀಲ್ , ಕರವಸೂಲಿಗಾರರಾದ ಮಹಾಂತೇಶ, ಕೆಎಚ್ ಪಿಟಿ ತಾಲೂಕು ಸಂಯೋಜಕರಾದ ಶರಣಬಸವ ,ಆರೋಗ್ಯ ಸಹಾಯಕರಾದ ದುರಗೇಶ, ಶ್ರೀದೇವಿ ಸೇರಿ ಗ್ರಾಪಂ ಸಿಬ್ಬಂದಿಗಳು ಇದ್ದರು.