ಜಂಗಮರು ಸೂರ್ಯ ಚಂದ್ರನಂತೆ ಅಜರಾಮರ:ಮಸೂತಿಶ್ರೀ

ತಾಳಿಕೋಟೆ:ಮಾ.20: 18ನೇ ಶತಮಾನದಲ್ಲಿ ಅಷ್ಟವರ್ಣದಲ್ಲಿ ನವಮಿ ಭಾಗಗಳನ್ನು ಬಸವಾದಿ ಶರಣರು ತಿಳಿಸುತ್ತಾರೆ ಚ್ಯಾರಿತ್ರ್ಯ ಚೆನ್ನಾಗಿದ್ದವರ ಚರಿತ್ರೆ ತಯಾರಾಗುತ್ತದೆ ಕಲ್ಮಷವಾದ ಮನಸ್ಸನ್ನು ಸ್ವಚ್ಚ ಮಾಡಿ ಜಂಗಮರ ಮಹತ್ವ ತಿಳಿಸುತ್ತಾರೆ ಜಂಗಮರೆಂದರೆ ಸಾಮಾನ್ಯರಲ್ಲಾ ಅವರು ಎಲ್ಲವನ್ನು ಬಿಚ್ಚಿಡುತ್ತಾರೆ ಸೂರ್ಯ ಚಂದ್ರ ಇರುವತನಕ ಜಂಗಮ ಅನ್ನುವದು ಉಳಿಯುತ್ತದೆ ಕಾರಣ ಜಂಗಮರಿಗೆ ಮರಣವಿಲ್ಲಾವೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಮಂಗಳವಾರರಂದು 9ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಜಂಗಮ ಮಳೆಯಂತೆ ಬಂದು ಮಠದಲ್ಲಿದ್ದು ಎಲ್ಲವನ್ನು ಉದ್ದಾರ ಮಾಡುತ್ತಾರೆಂದು ಪವಾಡ ಪುರುಷ ಬಾಗಲಕೋಟೆಯ ಲಡ್ಡುಮುತ್ಯಾರವರ ಪವಾಡ ದೃಶ್ಯಗಳ ಕುರಿತು ವಿವರಿಸಿದ ಅವರು ಜಂಗಮನಾದವನು ನಿಂತ ನೀರಾಗಬಾರದು ಚಲ ಜಂಗಮನಾಗಿ ಭಕ್ತರ ಉದ್ದಾರ ಮಾಡಬೇಕೆಂದರು.
ಚಲ ಜಂಗಮ ಸ್ವಯ ಜಂಗಮ ಕುರಿತು ವಿವರಿಸಿದ ಶ್ರೀಗಳು ಮಹಿಳೆಯೋರ್ವಳು ಚಿಕ್ಕ ಮಗನೊಂದಿಗೆ ಮನೆಗೆ ಕಟ್ಟಿಗೆ ತರಲು ಹೊಲಕ್ಕೆ ಹೋಗುತ್ತಾಳೆ ಮಗನನ್ನು ಕೆಳಗೆ ಇಳಿಸಿ ಕಟ್ಟಿಗೆ ಹೊರೆ ಕಟ್ಟುವ ಕಾರ್ಯ ನಡೆಸಿದಾಗ ಇತ್ತ ಮಗ ಆಡುತ್ತಾ ಹೂವಿನ ಗಿಡಕ್ಕೆ ಹೋಗಿ ಕೈ ಹಾಕಿದಾಗ ಅದರಲ್ಲಿದ್ದ ಹಾವೊಂದು ಆ ಮಗನಿಗೆ ಕಡಿದ ಪರಿಣಾಮ ಮೃತಪಡುತ್ತಾನೆ ಈ ಸುದ್ದಿ ಅರೀತ ತಾಯಿಯು ಅಳುತ್ತಾ ದೇವನ ಮೇಲೆ ಶಪಿಸುತ್ತಾ ತನ್ನ ಬಡತನದ ಬೆಸೆಯನ್ನು ಹೊರಹಾಕುತ್ತಿದ್ದ ಸಮಯದಲ್ಲಿ ಅಲ್ಲಿ ಪತ್ರಿ ಹರಿಯಲು ಬಂದ ಸ್ವಾಮಿಯೊಬ್ಬನು ಇದನ್ನು ನೋಡಿ ಸಂಪೂರ್ಣ ವಿಷಯ ತಿಳಿದ ಸ್ವಾಮಿಜಿ ಆ ಮಗು ಸತ್ತಿಲ್ಲಾ 3 ದಳದ ಪತ್ರಿ ತೆಗೆದುಕೊಂಡು ನೀರು ಸಿಂಪಡಿಸಿ ಆ ಮಗುವಿನ ಬಾಯಿಯಲ್ಲಿ ಪ್ರಸಾದದ ರೂಪದಲ್ಲಿ ತೀರ್ಥಹಾಕಿದಾಗ ಆ ಸತ್ತ ಮಗು ಎದ್ದು ಕುಳಿತುಕೊಳ್ಳುತ್ತಾನೆ ಅಂತಹ ಕಾರ್ಯ ಹೊಸಳ್ಳಿ ಭೋಗೇಶ್ವರರು 12ನೇ ಶತಮಾನದ ಸಮಕಾಲಿನವರು ಮಾಡಿರುವದನ್ನು ಶ್ರೀಗಳು ವಿವರಿಸಿದರು.
ಇತ್ತ ನಿರುಪಾದೀಶ್ವರ ಬಡತನದ ಮನೆಯೊಂದಕ್ಕೆ ಹೋಗುತ್ತಾನೆ ಆ ಮನೆಯಲ್ಲಿ ಹೋಗಿ ನನಗೆ ಹಸಿವಾಗಿದೆ ಊಟ ನೀಡಿ ಎಂದು ಹೇಳಿದಾಗ ಆ ಮನೆಯ ಬಡ ಕುಟುಂಭದವರು ಮನೆಯಲ್ಲಿ ಹಿಟ್ಟಿಲ್ಲಾ, ಅನ್ನಾ ಇಲ್ಲಾ ಏನು ಮಾಡಬೇಕೆಂದು ವಿಚಾರ ಮಾಡಿ ಇದನ್ನು ತಿಳಿಸಿದಾಗ ನಿರುಪಾದೀಶ್ವರ ಮನೆಯ ಕಟ್ಟಿಗೆ ತುಂಡಕ್ಕೆ ಕಟ್ಟಿದ ಜೋಳದ ತೆನೆಗಳಲ್ಲಿಯ ಜೋಳದ ಕಾಳಿನ ಗುಗ್ಗರಿಯನ್ನಾದರೂ ಮಾಡಿಕೊಡಿ ಎಂದು ಹಟ ತೊಡುತ್ತಾನೆ ನಿರುಪಾದೀಶ್ವರ ಹೇಳಿದಂತೆ ತೊಲೆಯ ಮೇಲಿದ್ದ ಜೋಳದ ತೆನೆಯಲ್ಲಿಯ ಕಾಳನ್ನು ಉದರಿಸಿ ಗುಗ್ಗರಿ ಮಾಡಲು ಒಲೆಯ ಮೇಲೆ ಆ ಗಡಿಗೆಯನ್ನು ಇಟ್ಟು ಕುದಿಸಲು ಪ್ರಾರಂಬಿಸುತ್ತಾರೆ ಇದನ್ನು ನೋಡಿದ ನಿರುಪಾದೀಶ್ವರ ಆ ಕುದಿಯುವ ಗಡಿಗೆಯನ್ನು ತನ್ನ ತಲೆಯ ಮೇಲಿಡಲು ಹಟ ತೊಡುತ್ತಾರೆ ಬೇಡಾ ಮೈಯಲ್ಲಾ ಸುಟ್ಟು ಹೋದೀತೆಂದು ಆ ಬಡ ಕುಟುಂಭ ಹೇಳಿದರೂ ಅದಕ್ಕೆ ಕಿವಿಗೊಡದೇ ನಿರುಪಾದೀಶ್ವರ ಕುದಿಯುವ ಗಡಿಗೆಯನ್ನೇ ತಲೆಯ ಮೇಲೆ ಇಟ್ಟುಕೊಂಡು ನಿಲ್ಲುತ್ತಾನೆ ಆ ಕುಟುಂಭಕ್ಕೆ ಹೇಳಿ ತಲೆಯ ಮೇಲಿಟ್ಟ ಗಡಿಗೆಗೆ ಒನಕೆಯಿಂದ ಹೊಡೆಯಲು ಒತ್ತಾಯಿಸುತ್ತಾನೆ ಬೇಡಾ ಬೇಡಾ ಮೈಮೇಲೆ ಹೋಯ್ದಾಡುವ ಗುಗ್ಗರಿಗಳು ಬಿಳ್ಳುತ್ತವೆ ಎಂದರೂ ಕೇಳದ ನಿರುಪಾದೀಶ್ವರ ಒನಕೆಯಿಂದ ಗಡಿಗೆಗೆ ಹೊಡೆಯಲು ಹಟ ತೊಡುತ್ತಾನೆ ಕೊನೆಗೆ ಆ ಕುಟುಂಭದವರು ಒನಕೆಯಿಂದ ಗಡಿಗೆಗೆ ಹೊಡೆದಾಗ ಅದರಲ್ಲಿದ್ದ ಎಲ್ಲ ಜೋಳದ ಕಾಳುಗಳು ಮೈ ತುಂಬಾ ಮುತ್ತಾಗಿ ಬಿಳ್ಳುತ್ತವೆ ಇದನ್ನು ಪವಾಡ ದೃಶ್ಯಕಂಡ ಆ ಬಡ ಕುಟುಂಬ ಮುಂದೆ ಶ್ರೀಮಂತಿಕೆಯಲ್ಲಿ ಮುಂದುವರೆಯುತ್ತಾರೆಂದು ಶ್ರೀಗಳು ನುಡಿದರು.
ಬಸವಾದಿ ಶರಣರು ಕಾಯಕ ಮಾಡುತ್ತಿದ್ದರು ಬಸವಣ್ಣನವರು ಕೋರಿ ಬಸ್ಸಪ್ಪ ಶೆಟ್ಟಿ ಎಂಬ ಹೆಸರಿನಿಂದ ಕಾಸ್ಮೀರಕ್ಕೆ ಹೋಗಿ ಮಸಾಲೆ ಸಾಮಾನನ್ನು ತೆಗೆದುಕೊಂಡು ಮಾರಾಟಕ್ಕೆ ನಿಲ್ಲುತ್ತಾರೆ ಒಳ್ಳೆಯ ಸುವಾಸನೆ ಬೀರುತ್ತಿದ್ದ ಈ ಕೋರಿ ಬಸ್ಸಪ್ಪ ಶೆಟ್ಟಿಯಾಗಿ ಹೋದ ಇವರ ಮಸಾಲೆ ಸಾಮಾನು ಒಳ್ಳೆಯ ಸುವಾಸನೆ ಬೀರುತ್ತಾ ಸಾಗುತ್ತದೆ ಇದನ್ನು ಲಕ್ಷೀಸಿದ ಅಲ್ಲಿದ್ದ ಸುಮಾರು 6 ಸಾವಿರ ಜಂಗಮರು ನೀವು ಯಾರು ಎಲ್ಲಿಂದ ಬಂದೀರಿ ಎಂದು ಕೇಳಿದಾಗ ಕಲ್ಯಾಣದಿಂದ ಬಂದಿದ್ದೇನೆಂದು ಈ ಕೋರಿ ಬಸ್ಸಪ್ಪ ಶೆಟ್ಟಿ ಅವರು ಹೇಳಿದಾಗ ಅಷ್ಟದೂರ ಹೇಗೆ ಬರಲು ಸಾದ್ಯವೆಂದು ಪ್ರಶ್ನೀಸಿದಾಗ ಈ ಕೋರಿ ಬಸ್ಸಪ್ಪ ಶೆಟ್ಟಿ ಅಲ್ಲಿಯ 6 ಸಾವಿರ ಜಂಗಮರಿಗೆ ವಿಭೂತಿ ಹಚ್ಚಿ ಮಾತನಾಡುವಷ್ಟರಲ್ಲಿಯೇ ಕಾಸ್ಮೀರದಿಂದ ಕಲ್ಯಾಣಕ್ಕೆ ಬಂದು ಕುಳಿತಿದ್ದರಂತೆ ಬಸವಣ್ಣನವರ ದೇವ ಭಕ್ತಿ ಹಾಗೂ ಅವರು ಶಕ್ತಿಯ ಕುರಿತು ಶ್ರೀಗಳು ವಿವರಿಸಿದರು.
ಅನಿಷ್ಠ ಕಳಿಯುವ ಶಕ್ತಿ ರುದ್ರಾಭಿಷೇಕದಲ್ಲಿದೆ ವಿಘ್ನಗಳನ್ನು ತಪ್ಪಿಸುವ ಶಕ್ತಿ ಯಜ್ಞದಲ್ಲಿದೆ ಮನುಷ್ಯರಲ್ಲಿ ಬೀಗಿ ಬೇಕು ದೇವರಿದ್ದಾರೆಂಬ ವಿಸ್ವಾಸ ಬೇಕೆಂದು ಹೇಳಿದ ಶ್ರೀಗಳು ನಿರುಪಾದೀಶ್ವರ ಒಂದು ಬಡ ಕುಟುಂಭದ ಮನೆಗೆ ಹಿಟ್ಟಿಗೆ ಹೋಗುತ್ತಾರೆ ಆ ಸಮಯದಲ್ಲಿ ಪತಿ ಪತ್ನಿಯರು ಜಗಳ ಮಾಡಿರುತ್ತಾರೆ ಇವರು ಹಿಟ್ಟಿಗೆ ಹೋದಾಗ ನಾವು ನೀಡುವದಿಲ್ಲಾ ಮುಂದಕ್ಕೆ ಹೋಗಿ ಎಂದಾಗ ನಿರುಪಾದೀಶ್ವರರು ಪಟ್ಟು ಹಿಡಿದು ನೀಡುವ ತನಕ ಹೋಗುವದಿಲ್ಲಾವೆಂದಾಗ ಈ ಇಬ್ಬರು ಪತಿ ಪತ್ನಿಯರು ಕೊನೆಗೆ ಜಳಕ ಮಾಡಿ ನಿರುಪಾದೀಶ್ವರನಿಗೆ ಹಿಟ್ಟು ನೀಡಿದಾಗ ನಿಮ್ಮ ಮನೆಯ ನಡುವಿನ ಕಂಬ ಲಕ್ಷ್ಮೀಯಾಗಿ ಪರಿವರ್ತನೆಗೊಂಡು ಮನೆಯು ಉಕ್ಕೇರಿ ಪರಿವರ್ತನೆಯಾಗುತ್ತದೆ ಎಂದು ಹೇಳಿದಂತೆ ಆ ಮನೆಯು ಶ್ರೀಮಂತಿಕೆಯಿಂದ ಮುಂದುವರೆಯುತ್ತದೆ ಎಂದು ತಿಳಿ ಹೇಳಿದರು.
ಇದು ಅಲ್ಲದೇ ನಿರುಪಾದೀಶ್ವರ ಬಡತನದ ಮನೆಯೊಂದಕ್ಕೆ ಹೋಗಿ ಅಲ್ಲಿದ್ದ ಅಜ್ಜಿ ಮೊಮ್ಮಗ ನಡೆಸುತ್ತಿದ್ದ ಸಂಸಾರವನ್ನು ಅರೀತು ಆಕೆಯ ಮೊಮ್ಮಗ ನಿರುಪಾದೀಶ್ವರನನ್ನು ಕರೆದುಕೊಂಡು ಮನೆಗೆ ಹೋದಾಗ ಅಲ್ಲಿದ್ದ ತಿಪ್ರಿ ಬೆಳ್ಳಿಯಿಂದ ಆಗುತ್ತಿದ್ದ ತಿಪ್ರಿಕಾಯಿಯನ್ನು ಹರಿದು ಉಪಜೀವನ ಮಾಡುತ್ತಿದ್ದ ಈ ಬಡಪಾಯಿಗಳು ಆ ತಿಪ್ರಿಗಿಡದ ಬಡ್ಡೆಯನ್ನು ಕಿತ್ತಿ ಒಗೆಯುತ್ತಾರೆ ನಿರುಪಾದೀಶ್ವರರು ಎದರಿಂದ ಉಪಜೀವನ ಆಗುತ್ತಿತ್ತು ಅದರ ಬಡ್ಡೆಯನ್ನೇ ಕಿತ್ತು ಬಿಟ್ಟಿರಿ ಎಂದಾಗ ನಿರುಪಾದೀಶ್ವರರು ಹೇಳುತ್ತಾರೆ ಆ ಬಡ್ಡೆ ಕಿತ್ತಿದ ಸ್ಥಳದಲ್ಲಿ ಇನ್ನಷ್ಟು ಅಗೇದು ಅದೇ ಬಡ್ಡೆ ಹಚ್ಚಿರಿ ದೊಡ್ಡ ಮರವಾಗುತ್ತದೆ ಎಂದು ಹೇಳಿದಾಗ ಅದೇ ಸ್ಥಳದಲ್ಲಿ ಅಜ್ಜಿ ಮೊಮ್ಮಗ ಅಗೆಯಲು ಪ್ರಯತ್ನಿಸಿದಾಗ ಆ ಭೂಮಿಯ ಒಳಗೆ ಚಿನ್ನ ತುಂಬಿದ ಹಾಂಡೆಯೇ ಕಾಣುತ್ತದೆ ಇದನ್ನು ನೋಡಿ ಸಂತಸಪಟ್ಟ ಆ ಅಜ್ಜಿ ಮೊಮ್ಮಗ ಆಶ್ಚರ್ಯ ಚಕಿತರಾಗಿ ನಿರುಪಾದೀಶ್ವರರಿಗೆ ನಮಿಸಿ ತಮ್ಮನ್ನು ಉದ್ದರಿಸಿದ್ದರ ಬಗ್ಗೆ ಅನ್ಯರ ಎದುರಿಗೆ ಕೊಂಡಾಡುತ್ತಾರೆಂದು ಶ್ರೀಗಳು ನುಡಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.