ಛೋಟಾ ಬಾಂಬೆ ಸಿನಿಮಾ ತಂಡಕ್ಕೆ ಸನ್ಮಾನ


ಧಾರವಾಡ ನ.03- ಕದಂಬ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ವೈಕೆ ಸಿನಿ ಕ್ರಿಯಶನ್ಸ್ ಬ್ಯಾನರನಡಿ ನಿರ್ಮಾಣಗೊಂಡ ಛೋಟಾ ಬಾಂಬೆ ಸಿನಿಮಾ ತಂಡದವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮವು ಪೃಥ್ವಿ ಗಾರ್ಡನ್ ಸಬಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಯೂಸೂಫ್ ಖಾನ, ಛೋಟಾ ಬಾಂಬೆ ಚಲನಚಿತ್ರ ವಿಭಿನ್ನವಾಗಿದೆ. ಉತ್ತರ ಕರ್ನಾಟಕ ಭಾಷೆಯಲ್ಲಿ ನಿರ್ಮಾಣಗೊಂಡಿದೆ ಎಂದರು.ಈ ಭಾಗದ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಶಾಂತಿ ಸೌರ್ಹಾದಿತವಾಗಿ ಸರ್ವರ್ಧಮಿಯರು ಜೀವನ ನಡೆಸಬೇಕೆಂಬ ಸಂದೇಶ ಹೊಂದಿದ ಚಲನಚಿತ್ರ ಇದಾಗಿದೆ. ಎಲ್ಲರೂ ಈ ಚಲನಚಿತ್ರವನ್ನು ವೀಕ್ಷಿಸಿ ಪೆÇ್ರೀತ್ಸಾಹಿಸಬೇಕೆಂದರು.
ಛೋಟಾ ಬಾಂಬೆ ಚಲನಚಿತ್ರದ ಸಹನಿರ್ದೇಶನ ದೀಪಕ ಬೊಂಗಾಳೆ, ಸಹ ನಿರ್ಮಾಪಕರು ಅಸದ್ ಖಾನ ಕಿತ್ತೂರ, ನಾಯಕ ನಟರು ಸುರಜ್ ಸಾಸನೂರ, ಅಭಿಷೇಕ ಜಾಲಿಹಾಳ, ನಾಯಕಿಯರು ಯಶಸ್ವಿನಿ ಶೆಟ್ಟಿ, ಶನಿಯಾ ಕಟವೇ, ರಾಜ ಕ್ರೆಜಿ, ಅತ್ತಾರ, ಶಂಕರ ಅಶ್ವಥ, ಸಲೀಂ ಮುಲ್ಲಾನವರ, ಸಿನಿಮಾಟೋಗ್ರಫಿ ಗೌರಿ ವೆಂಕಟೇಶ, ಸಾಹಸ ಕೌರವ ವೆಂಕಟೇಶ, ನೃತ್ಯ ಸುರೇಶ, ಪ್ರಸಾಧನ ಬಸವರಾಜ ಎಂ., ಕಾಸ್ಟುಮ್ ಶಿವಾಜಿ ನಟಿಸಿದ್ದಾರೆ.
ಕದಂಬ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಾರುತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಸುಭಾಸ ಮುಳ್ಳೂರ, ಗಿರೀಶ ಪಾಟೀಲ, ರಂಗನಾಥ ದಾಸರ, ಸೋಮಶೇಖರ ಚಿನ್ನಪ್ಪಗೌಡರ, ಲಿಂಗರಾಜ ಕೆಂಗಾನೂರ, ಫಜಲ್ ಮುನ್ಸಿ, ಬಸವರಾಜ ಗುರವಿ, ರವಿ ಹೊಂಡಪನವರ, ಮಾಲಿಂಗಪ್ಪ ಮೇಟಿ ಸೇರಿದಂತೆ ಇನ್ನಿತರರು ಇದ್ದರು.