
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.16: ನಗರದ ಬಲಿಜಭವನ ಸಭಾಂಗಣದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಮತ್ತು ಹೊಸ ಬ್ಯಾಚ್ ಕೋರ್ಸುಗಳ ಪ್ರಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ನಾಗೇಂದ್ರ, ಶಾಸಕ ನಾರ ಭರತ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ, ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಶ್ರೀನಿವಾಸ್ ರಾವ್, ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್ ಮತ್ತು ಗೌರವ ಕಾರ್ಯದರ್ಶಿಗಳಾದ, ಯಶವಂತರಾಜ್ ನಾಗಿರೆಡ್ಡಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಯಶವಂತರಾಜ್ ನಾಗಿರೆಡ್ಡಿ, ಸ್ವಾಗತಿಸಿದರು, ನಂತರ ಡಾ.ಡಿ.ಎಲ್.ರಮೇಶಗೋಪಾಲ್ ಇವರು ಮಾತನಾಡುತ್ತಾ, ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರ ಸಾಧನೆ ಮಾಡಿದ ವಿವರವನ್ನು ಪಿ.ಪಿ.ಟಿ ಮೂಲಕ ಸವಿಸ್ತಾರವಾಗಿ ಬಂತಹ ಮುಖ್ಯ ಅತಿಥಿಗಳಿಗೆ ತಿಳಿಸಿದರು ಇನ್ನು ಗುಣಮಟ್ಟದ ತರಬೇತಿ ನೀಡಲು ಸುಮಾರು 24 ಲಕ್ಷ ಖರ್ಚಾಗುತ್ತದೆ ಎಂದು ತಿಳಿಸಿದರು. ಹಾಗೂ ಚೇಂಬರ್ ಗೆ ಬೇಕಾಗುವ ಅವಶ್ಯಕತೆಗಳ ಬಗ್ಗೆ ಮಾನ್ಯರಲ್ಲಿ ಮನವಿ ಮಾಡಿದರು.
ಕೌಶಲ್ಯಾಭಿವೃದ್ದಿ ಕೇಂದ್ರದ ಕೋ-ಚೇರ್ಮನ್ ಇವರು ಮಾತನಾಡುತ್ತಾ, ಕೇಂದ್ರದಿಂದ ಸುಮಾರು 3600 ಮಹಿಳೆಯರಿಗೆ ಉಚಿತ ಕಂಪ್ಯೂಟರ ತರಬೇತಿ ನೀಡಿದ್ದೇವೆ ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ ರಾವ್ ಮಾತನಾಡುತ್ತಾ ಸಂಸ್ಥೆ ಬಂದ ದಾರಿ ಮತ್ತು ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಸವಿವರವಾಗಿ ಬಂದಂತಹ ಅತಿಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಸಂಸ್ಥೆ ಹಲವಾರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಮತ್ತು ದೂರದ ಪ್ರಾಂತಗಳಿಂದ ಬರುವ ರೈತರಿಗೆ ಭೋಜನ ನೀಡುವ ಸಲುವಾಗಿ ರೈತಣ್ಣನ ಊಟ ಮತ್ತು ರೈತಣ್ಣನ ಹಾಸಿಗೆ ಯೋಜನೆಯನ್ನು ಪ್ರಾರಂಭ ಮಾಡಿದ್ದೇವೆ ಎಂದು ಸಭೆಗೆ ತಿಳಿಸಿದರು. ತಮಗೆ ತಿಳಿದಂತೆ ಬಳ್ಳಾರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಉದಾಹರಣೆಗೆ ಒಣಮೆಣಿಸಿನಕಾಯಿ ಮಾರುಕಟ್ಟೆ, ಏರ್ಫೋಟ್, ಜೀನ್ಸ್ ಗಾರ್ಮೆಂಟ್ ಆಗಿರುಬಹುದು ಹಲುವಾರ ಬಾರಿ ಸರಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ ಅದರು ಕೂಡ ಇನ್ನು ಪ್ರಗತಿಯಲ್ಲಿ ಇಲ್ಲ ನಮ್ಮ ಸಂಸ್ಥೆಯು ರಾಜಕೀಯೇತರ ಸಂಸ್ಥೆಯಾಗಿದೆ, ಯಾವ ರಾಜಕಾರಣಿಗಳು ಉಪಯುಕ್ತವಾದ ಕೆಲಸವನ್ನು ಮಾಡಿಕೊಡುತ್ತಾರೆ ಅಂಥಹವರಿಗೆ ನಮ್ಮ ಸಂಸ್ಥೆಯ ಬೆಂಬಲವಿರುತ್ತದೆ ಎಂದು ತಿಳಿಸಿದರು.
ಸಚಿವರಾದ ಬಿ.ನಾಗೇಂದ್ರ, ಮಾತನಾಡುತ್ತಾ, ಸಂಸ್ಥೆಯ ಅದ್ಯಕ್ಷರು ಹೇಳಿದಂತೆ, ಒಣಮೆನಿಸಿನಕಾಯಿ ಮಾರುಕಟ್ಟೆ, ಏರ್ಫೋಟ್ ಜೀನ್ಸ್ ಗಾರ್ಮೆಂಟ್ ತರಲು ಶಕ್ತಿ ಮೀರಿ ಪ್ರಯತ್ನಮಾಡುತ್ತೇವೆ ಎಂದು ತಿಳಿಸಿದರು. ಹಾಗೂ ರಾಹುಲ್ ಗಾಂದಿ ಪ್ಯಾಕೇಜಿನಲ್ಲಿ ಹೇಳಿದಂತೆ ರೂ 5000 ಕೋಟಿ ವೆಚ್ಚವನ್ನು ಜೀನ್ಸ್ ಗಾರ್ಮೆಂಟ್ ತರಲು ಶತಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ನಾರ ಭರತ ರೆಡ್ಡಿ, ಮಾತನಾಡುತ್ತಾ, ಯುವಕರು ಗುಣಮಟ್ಟದ ತರಬೇತಿಯನ್ನು ಪಡೆದು ಸಬಲೀಕರಣರಾಗಬೇಕೆಂದು ತಿಳಿಸಿದರು ಮತ್ತು ನಿಮ್ಮ ಸಂಸ್ಥೆಗೆ ಹತ್ತು ಲಕ್ಷ ರೂಪಾಯಿ ದೇಣಿಗೆ ನೀಡುವದಾಗಿ ಸಭೆಗೆ ತಿಳಿಸಿದರು. ಇದಕ್ಕೆ ಯಶವಂತ್ ರಾಜ್ ನಾಗಿರೆಡ್ಡಿ, ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ನಂತರ ಬಿ.ನಾಗೇಂದ್ರ, ನಾರ ಭರತ ರೆಡ್ಡಿ, ಪ್ರಶಾಂತ ಕುಮಾರ ಮಿಶ್ರಾ, ಮತ್ತು ಶ್ರೀಮತಿ ಪದ್ಮಾವತಿ ಶ್ರೀನಿವಾಸ್ ರಾವ್, ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ ರಾವ್ ಮತ್ತು ಗೌರವ ಕಾರ್ಯದರ್ಶಿಗಳಾದ ಯಶ್ವಂತ್ ರಾಜ್ ನಾಗಿರೆಡ್ಡಿ ಹೂಗುಚ್ಛ ಮತ್ತು ಹಣ್ಣು ನೀಡಿ ಗೌರವಿಸಿದರು.
ನಾಗಳ್ಳಿ ರಮೇಶ್, ಚೇರ್ಮನ್,ಚೇಂಬರ್ ಕೌಶಲ್ಯಾಭಿವೃದ್ದಿ ಕೇಂದ್ರ ಇವರು ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷರು ಬಿ.ಮಹಾರುದ್ರಗೌಡ, ಉಪಾಧ್ಯಕ್ಷರಗಳಾದ ಎ.ಮಂಜುನಾಥ, ಕೆ.ರಮೇಶ ಬುಜ್ಜಿ, ಕೆ.ಸಿ.ಸುರೇಶ ಬಾಬು, ಜಂಟಿಕಾರ್ಯದರ್ಶಿಗಳಾದ ಎಸ್.ದೊಡ್ಡನಗೌಡ, ಸೊಂತ್ ಗಿರಿಧರ, ಕೌಶಲ್ಯಾಭಿವೃದ್ದಿ ಕೇಂದ್ರದ ಸಿ.ಇ.ಓ ಡಾ.ಡಿ.ಎಲ್. ರಮೇಶಗೋಪಾಲ್, ನಾಗಳ್ಳಿ ರಮೇಶ್, ಚೇರ್ಮನ್, ಆರ್.ಪಿ.ರಾಮಕೃಷ್ಣ, ಕೋ-ಚೇರ್ಮನ್, ಶ್ರೀಮತಿ ಪದ್ಮಾವತಿ ಶ್ರೀನಿವಾಸ್, ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಕಮಿಟಿಯ ಚೇರ್ಮನಗಳು, ವಿಶೇಷ ಆಹ್ವಾನಿತರು ಹಾಗೂ ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಮೇಲೆ ಇರುವ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.