
* ಚಿ.ಗೋ ರಮೇಶ್
ಹಾಸ್ಯ ಪ್ರಧಾನ ಪಾತ್ರದಿಂದ ನಾಯಕನಾಗಿ ಗಮನ ಸೆಳೆದಿರುವ ನಟ ಶರಣ್, “ಛೂ ಮಂತರ್ ” ಎಂದು ಮೋಡಿ ಮಾಡಲು ಮುಂದಾಗಿದೆ. ಅವರ ಜೊತೆಗೆ ನವನೀತ್ ಕೈಜೋಡಿಸಿದ್ದಾರೆ.
ಹಾರಾರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಇರುವ ” ಛೂ ಮಂತರ್ ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಈ ವೇಳೆ ಮಾತಿಗಿಳಿದ ನಿರ್ದೇಶಕ ನವನೀತ್, “ಛೂ ಮಂತರ್” ಎಂದರೆ ಫ್ಯಾನ್ಸಿ ವರ್ಡ್. ಈ ಪದ ತುಂಬಾ ಕಡೆ ಬಳಸುತ್ತಾರೆ. ಚಿತ್ರದಲ್ಲಿ ಮೂರು ಕಥೆಗಳಿವೆ. ಎಲ್ಲಾ ಕಥೆಗಳಿಗೂ ಮೂಲ ನಾಯಕ ಶರಣ್. ಇದುವರೆಗೂ ಅವರು ಸಂಪೂರ್ಣ ಹಾರರ್ ಚಿತ್ರದಲ್ಲಿ ನಟಿಸಿರಲಿಲ್ಲ ಇದು ಅವರ ಮೊದಲ ಈ ಮಾದರಿಯ ಚಿತ್ರ ಎಂದರು.
ನಟ ಶರಣ್ ಮಾತನಾಡಿ ಹಾರಾರ್ ಚಿತ್ರಗಳ ಅಭಿಮಾನಿ. ನವನೀತ್ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ.. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಈಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ. ಈ ಚಿತ್ರದ ಮತ್ತೊಂದು ಹೈಲೆಟ್ ಎಂದರೆ ಅನೂಪ್ ಛಾಯಾಗ್ರಹಣ ಎಂದು ಹೇಳಿದರು
ನಟಿ ಮೇಘನಾ ಗಾವಂಕರ್, ಪಾತ್ರ ಚೆನ್ನಾಗಿದೆ .ಒಳ್ಳೆಯ ಇದೆ ಎಂದರೆ ನಟಿ ಅದಿತಿ ಪ್ರಭುದೇವ ,ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು.
ಫಾರಿನ್ ರಿಟರ್ನ್ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಪ್ರಭು ಮುಂಡ್ಕರ್, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಧರ್ಮ ಹೇಳಿದರು. ರಜನಿ ಭಾರದ್ವಾಜ್ ಸಹ “ಛೂ ಮಂತರ್” ಬಗ್ಗೆ ಮಾತನಾಡಿದರು.
ನಿರ್ಮಾಪಕ ತರುಣ್ ಶಿವಪ್ಪ ಚಿತ್ರವನ್ನು ಬೆಂಗಳೂರು, ಮೈಸೂರು, ಉತ್ತರಕಾಂಡದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಶರಣ್ ಅವರೊಟ್ಟಿಗೆ ಚಿಕ್ಕಣ್ಣ, ಅದಿತಿ, ಪ್ರಭುದೇವ, ಪ್ರಭು ಮುಂಡ್ಕರ್, ಮೇಘನಾ ಗಾಂವ್ಕರ್, ಧರ್ಮ, ರಜನಿ ಭಾರದ್ವಾಜ್ ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ ಎಂದರು.
ಮೋಡಿಗೆ ಜೋಡಿ ಸಿದ್ದ
ನಟ ಶರಣ್ ಅವರು ಛೂ ಮಂತರ್ ಎಂದು ಮೋಡಿ ಮಾಡಲು ಸಿದ್ದರಾಗಿದ್ದಾರೆ. ಅವರೊಂದಿಗೆ ಮೇಘನಾ ಗಾವಂಕರ್, ಅದಿತಿ ಪ್ರಭುದೇವ, ರಜನಿ ಭಾರದ್ವಜ್ ಕೈ ಜೋಡಿಸಿದ್ದು ಜನರನ್ನು ಮಂತ್ರ ಮುಗ್ದಗೊಳಿಸಲು ಮುಂದಾಗಿದ್ದಾರೆ.