ಛಾಯಾಗ್ರಾಹಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ

ಕಲಬುರಗಿ:ನ.28: ಮೋಬೈಲ್ ಹಾವಳಿಯಲ್ಲಿ ಛಾಯಾಗ್ರಾಹಕರು ತೀರ್ವ ಸ್ಪರ್ಧೆಯನ್ನು ಎದುರಿಸುವಂತಾಗಿದೆ. ಛಾಯಾಗ್ರಾಹಕರಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಅವುಗಳಿಗೆ ಸಕಾರಾತ್ಮಕವಾಗಿ ಪರಿಹಾರವನ್ನು ಕಂಡುಕೊಳ್ಳಲು ಎಲ್ಲಾ ಛಾಯಾಗ್ರಾಹಕರ ಸಹಕಾರದೊಂದಿಗೆ ಸಂದಿಸುತ್ತೇನೆ. ಸರ್ಕಾರಿದಂದ ಛಾಯಾಗ್ರಾಹಕರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತೇನೆ ಎಂದು ಜಿಲ್ಲಾ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ಬಸವರಾಜ ತೋಟದ್ ಹೇಳಿದರು.
ನಗರದ ಜಗತ್ ವೃತ್ತ ಬಸವೇಶ್ವರ ಪುತ್ತಳಿಯ ಬಳಿ ‘ಕನ್ನಡ ಜಾನಪದ ಪರಿಷತ್’ ವತಿಯಿಂದ ಭಾನುವಾರ ಜರುಗಿದ ಸತ್ಕಾರದಲ್ಲಿ ಗೌರವವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕಾ ಛಾಯಾಗ್ರಾಹಕ ಶಿವಶಂಕರ ಬಿ. ಮಾತನಾಡಿ, ತೋಟದ್ ಅವರು ಅನೇಕ ವರ್ಷಗಳಿಂದ ಈ ಕಷೇತ್ರದಲ್ಲಿ ಕೆಲಸ ಮಾಡುತ್ತಿದ್ದದಾರೆ. ಅವರಿಗೆ ಛಾಯಾಗ್ರಾಹಕ ಸಮಸ್ಯೆಗಳ ಬಗ್ಗೆ ಸಮೀಪದಿಂದ ಗಮನಿಸಿದ್ದಾರೆ. ಇದನ್ನು ಮನಗಂಡು ಜಿಲ್ಲಾಧ್ಯಕ್ಷರನ್ನಾಗಿ ಚುನಾಯಿಸಲಾಗಿದೆ. ಅವರ ನೇತೃತ್ವದಲ್ಲಿ ಎಲ್ಲಾ ಛಾಯಾಗ್ರಾಹಕರು ನಮ್ಮ ಸಮಸ್ಯೆಗಳಿಗೆ ಸಂಘಟಿತ ಪ್ರಯತ್ನ ಮಾಡೋಣ ಎಂದರು.
ಕಜಾಪ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ನಿಂಗಪ್ಪ, ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಂಘಟನಾ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಸದಸ್ಯರಾದ ಹಿರಗಪ್ಪ ಎಸ್.ಬರಗಲಿ, ಶಿವಶಂಕರ ಬಿ., ಸಿದ್ದಣ್ಣ ಗುಡ್ಡಾ, ಸಾಯಬಣ್ಣ ಹೋಳ್ಕರ್, ವಿಜಯಲಕ್ಷ್ಮೀ ಗುತ್ತೇದಾರ, ಸೇಡಂ ತಾಲೂಕಾಧ್ಯಕ್ಷ ಶಿವರಾವ ಭೋವಿ, ಕಲಬುರಗಿ ದಕ್ಷಿಣ ನಿಯೋಜಿತ ಅಧ್ಯಕ್ಷ ಸಿದ್ದಲಿಂಗಪ್ಪ ಬಾಗಲಕೋಟ್ ಇದ್ದರು.