ಛಾಯಾಗ್ರಾಹಕರ ಸಂಘಕ್ಕೆ ನಿವೇಶನ ಭರವಸೆ

ಕೋಲಾರ,ಜ.೭:ತಾಲ್ಲೂಕು ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಹಕರ ಸಂಘದ ಅಭಿವೃದ್ಧಿಗಾಗಿ ಸಿಎ ನಿವೇಶನ ಸರ್ಕಾರದಿಂದ ಮಂಜೂರು ಮಾಡಲು ಸಹಕರಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಭರವಸೆ ನೀಡಿದರು.
ನಗರ ಹೊರವಲಯದ ಖಾಸಗಿ ಸ್ಥಳದಲ್ಲಿ ನಡೆದ ತಾಲೂಕು ಛಾಯಾಗ್ರಾಹಕರ ಮತ್ತು ವಿಡಿಯೋ ಗ್ರಾಹಕರ ಸಂಘದ ವತಿಯಿಂದ ೨೦೨೧ನೇ ವರ್ಷದ ಡೈರಿ ಹಾಗೂ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು, ರಾಜ್ಯದಲ್ಲಿಯೇ ಮಾದರಿಯಾಗಿರುವ ಕೋಲಾರ ಛಾಯಾಗ್ರಾಹಕರ ಸಂಘಕ್ಕೆ ಸಿಎ ಸೈಟನ್ನು ಕೊಡಿಸಲು ಶ್ರಮಿಸುತ್ತೇನೆ ಎಂದು ಅವರು ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ. ಮಂಜುನಾಥ್ ಮಾತನಾಡಿ, ಕೋಲಾರದಲ್ಲಿ ಛಾಯಾಗ್ರಹಕರ ಸಂಘವು ಉತ್ತಮ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಂಘ ಹೀಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದರು ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು.
ಕೋಲಾರ ಜಿಲ್ಲಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಹಕರ ಜಿಲ್ಲಾಧ್ಯಕ್ಷ ವಿ.ಕೃಷ್ಣ ಮಾತನಾಡಿ, ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಹಕರ ಏಳಿಗೆಗೆ ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಸಿಎ ನಿವೇಶನ ಕೊಡಿಸಲು ಮುಂದೆ ಬಂದಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಅವರಿಗೆ ನಮ್ಮ ಸಂಘ ಅಬಾರಿಯಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಹಾಬಿ ರಮೇಶ್, ಕೆ.ಎನ್.ಶ್ರೀನಿವಾಸ್ ಮೂರ್ತಿ, ಬಾಬಣ್ಣ, ಮುಖಂಡ ಗಲ್‌ಪೇಟೆ ಜರ್ನಾದನ್ ಕೋಲಾರ ತಾಲ್ಲೂಕು ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಹಕರ ಸಂಘದ ಗೌರವ ಅಧ್ಯಕ್ಷ ಎನ್.ಮಂಜುನಾಥ್, ತಾಲೂಕು ಅಧ್ಯಕ್ಷ ಸ್ಪಂದನ ರಂಗನಾಥ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಖಜಾಂಚಿ ಸತೀಶ್ ಕುಮಾರ್, ಹಾಗೂ ಉಪಾಧ್ಯಕ್ಷ ಉಮೇಶ್ ಪದಾಧಿಕಾರಿಗಳಾದ ಆನಂದ್‌ಕುಮಾರ್ , ರಮೇಶ್, ನವೀನ್, ಅರುಣ್, ಮಂಜುನಾಥ್, ರಾಜೇಂದ್ರ ಪ್ರಸಾದ್, ಜೀವಿ ಆನಂದ್, ಚಂದ್ರು, ಖಲೀಲ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.