ಛಾಯಾಗ್ರಾಹಕರಿಗೆ ಕ್ಯಾಮೆರಾ ಬಗ್ಗೆ ಒಂದು ದಿನದ ತರಬೇತಿ

ಕಲಬುರಗಿ,ಮೇ.22-ಕಲಬುರಗಿ ಜಿಲ್ಲಾ ಫೆÇೀಟೊಗ್ರಾಫರ್ಸ ಅಸೋಸಿಯೇಷನ್ ಹಾಗೂ ಕ್ಯಾನನ್ ಕಂಪನಿಯ ಸಹಯೋಗದೊಂದಿಗೆ ಜಿಲ್ಲೆಯ ಛಾಯಾಗ್ರಾಹಕರಿಗಾಗಿ ಕ್ಯಾಮರಾ ಬಗ್ಗೆ ಒಂದು ದಿನದ ತರಬೇತಿಯು ಖ್ಯಾತ ತರಬೇತಿದಾರರಾದ ಮಿಸ್ಟರ್ ಮ್ಯಾಥಿವ್ ದೇವ ಅವರು ನೀಡಿದರು.
ಕಲಬುರಗಿ ಜಿಲ್ಲಾ ಫೆÇೀಟೋಗ್ರಾಫರ್ಸ ಅಸೋಸಿಯೇಷನ್ ಅಧ್ಯಕ್ಷÀ ಬಸವರಾಜ ಸಿ ತೋಟದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ತಂತ್ರಜ್ಞಾನದ ಯುಗದಲ್ಲಿ ಹೇಗೆ ಹೊಸ ತಂತ್ರಜ್ಞಾನದ ಕ್ಯಾಮರಾಗಳು ಬರುತ್ತಿವೆ. ಹಾಗೆ, ನಮ್ಮ ಛಾಯಾಗ್ರಾಹಕರು ಕೂಡ ಅದರೊಂದಿಗೆ ಹೊಂದಿ ಕೊಂಡು ಸಾಗಬೇಕು ಮತ್ತು ನಮ್ಮನ್ನು ನಾವು ಅಭಿವೃದ್ಧಿ ಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಒಂದು ಫೆÇೀಟೊ ಸಾವಿರ ಪದಗಳ ಅರ್ಥವಾಗಿರುತ್ತದೆ. ಛಾಯಾಗ್ರಾಹಕರಿಗೆ ಇದೇ ರೀತಿ ಅಗತ್ಯ ತರಬೇತಿ ನೀಡಿದರೆ ಅವರು ಉತ್ತಮ ಛಾಯಾಗ್ರಾಹಕರಾಗಿ ಹೊರಹೊಮ್ಮಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಯಾನನ್ ಕಂಪನಿಯ ವ್ಯವಸ್ಥಾಪಕ ಅಜಯ, ಅಸೊಶಿಯೇಶನ್ ಕಾರ್ಯದರ್ಶಿಗಳಾದ ಅನೀಲಕುಮಾರ ಎಸ್ ಹುಮನಾಬಾದ, ರಮೇಶ್ ಲಾಲಬುಂದ್ರೆ, ಅಪ್ಸರ ಪಟೇಲ್, ಹಿರಿಯ ಛಾಯಾಗ್ರಾಹಕರಾದ ಫೆÇೀಟೊ ನರೇಶ್, ಪರಮೇಶ್ವರ, ಆರ ಎಸ್ ಪಾಟೀಲ, ಗಂಗಾರಾಮ ರಾಠೊಡ,ಆಕಾಶ ಪುಜಾರಿ, ಸಿದ್ದು ಚೆಟ್ಟಿ, ಆಕಾಶ, ಶೇರಖಾನೆ, ರಾಜು ಚಿತ್ತಾಪುರ, ಮಲ್ಲಿಕಾರ್ಜುನ ಲಿಗಾಡೆ. ಮಲ್ಲಿಕಾರ್ಜುನ ಹಾವಣಿ ಶ್ರೀನಿವಾಸ ಹಾಗೂ ಅನೇಕ ಛಾಯಾಗ್ರಾಹಕರು ಉಪಸ್ಥಿತಿರಿದ್ದರು.