ಛಾಯಾಗ್ರಾಹಕರಿಗೆ ಆಹಾರ ಕಿಟ್ ವಿತರಣೆ

ಹುಬ್ಬಳ್ಳಿ, ಜೂ 8: ಹುಬ್ಬಳ್ಳಿ ಫೆÇೀಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಆಶ್ರಯದಲ್ಲಿ ಕೊವಿಡ್ ಲಾಕ್‍ಡೌನ್‍ನಲ್ಲಿ ಸಂಕಷ್ಟಕ್ಕೀಡಾದ ಛಾಯಾಗ್ರಹಕರಿಗೆ, ವಿಡಿಯೋಗ್ರಾಫರರಿಗೆ ನಗರದ ಕಿರಣ್ ಸ್ಟುಡಿಯೋದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್ ಅವರು ಆಹಾರದ ಕಿಟ್‍ಗಳನ್ನು ವಿತರಿಸಿದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ ಶೆಟ್ಟರ್, ಕೊರೊನಾ ಹೊಡೆದೋಡಿಸಲು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೊರಗೆ ಅನವಶ್ಯಕವಾಗಿ ಬರದೆ ಸಹಕರಿಸಿದರೆ ಸೋಂಕನ್ನು ನಿಯಂತ್ರಿಸಬಹುದು. ಅಲ್ಲದೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು.

ಛಾಯಾಗ್ರಹಕರು ಸದಾ ಎಲ್ಲರಿಗೂ ಬೇಕಾದವರು. ಎಲ್ಲರಿಗೂ ಸ್ಮೈಲ್ ಪ್ಲೀಸ್ ಅನ್ನುವವರು. ಅವರಿಗೆ ಸಹಾಯ ಮಾಡಿದ್ದು ನನಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿಯೂ ಅವಶ್ಯವಿದ್ದರೆ ಸಹಾಯಕ್ಕೆ ಸಿದ್ಧ. ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಮತ್ತು ದಿನೇಶ್ ದಾಬಡೆ ಇವರ ನೇತೃತ್ವದಲ್ಲಿ ಸಂಘ ಚೆನ್ನಾಗಿ ನಡೆಸುತ್ತಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಮಾತನಾಡಿ ವಿ.ಪ ಸದಸ್ಯರಾದ ಪ್ರದೀಪ ಶೆಟ್ಟರ್ ಅವರು ಸಂಘದ ಸದಸ್ಯರಿಗೆ 250 ಆಹಾರ ಫುಡ್‍ಕಿಟ್‍ಗಳನ್ನು ಕೊಟ್ಟಿದ್ದು ಸಂಘ ಅವರಿಗೆ ಚಿರರುಣಿಯಾಗಿದೆ. ಸಂಘದ ಸದಸ್ಯರಿಗೆ ಸಂಘದಿಂದ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಿದ್ದು, ಇದು ನಿರಂತರ ಸಾಗುತ್ತದೆ ಎಂದರು. ಅಲ್ಲದೆ ಕಳೆದ ವಷವೂ ಪ್ರದೀಪ್ ಶೆಟ್ಟರ್ ಸಹಾಯ ಹಸ್ತ ಚಾಚಿದ್ದನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ದಿನೇಶ್ ದಾಬಡೆ, ಖಜಾಂಚಿ ಅನಿಲ್ ತುರಮರಿ, ಆನಂದ್ ರಾಜೋಳ್ಳಿ, ರವೀಂದ್ರ ಕಾಟಿಗರ, ವಿನಾಯಕ್ ಸಫಾರೆ, ವಿಜಯ ಮೆಹರವಾಡೆ, ವಜೀರ, ರಶೀದ್, ಶಿವಾನಂದ ಹಳಿಜೋಳ, ವಿನಾಯಕ ಬಾಕಳೆ, ವಿಜಯ್ ಬಾಕಳೆ, ಪ್ರಕಾಶ ಬಸವಾ, ಪ್ರವೀಣ್ ಹಣಗಿ ಮತ್ತಿತರ ಛಾಯಾಗ್ರಹಕರು ಇದ್ದರು.