ಛಾಯಾಗ್ರಾಹಕರಿಗಾಗಿ ಒಂದು ದಿನದ ಕಾರ್ಯಾಗಾರ

ಕಲಬುರಗಿ,ನ.18-ಜಿಲ್ಲಾ ಫೆÇಟೊಗ್ರಾಫರ್ಸ ಅಸೋಸಿಯೇಷನ್ ಹಾಗೂ ಬಾಲಾಜಿ ಫೆÇೀಟೊ ಮತ್ತು ಟ್ರೇಡಿಂಗ್ ಸೋಲಾಪುರ ಮತ್ತು ಕೆ.ರಾಜ ಡಿಜಿಟಲ್ ಪ್ರೆಸ್ ಸೋಲಾಪುರ ಇವರ ಸಹಯೋಗದಲ್ಲಿ ಛಾಯಾಗ್ರಾಹಕರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಇಮೇಜ್ ಮಾಸ್ಟರ್ ಎಂದು ಹೆಸರಾದ ಮಹಾರಾಷ್ಟ್ರದ ಪುನಾದ ವಿಕಾಸ ಇಂಗಳೆ ಅವರು ಕ್ಯಾಮರಾ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಯಾವರಿತಿ ಫೆÇಟೊಗ್ರಾಫರ್ಸರು ಮತ್ತು ಅವರ ಉಪಕರಣಗಳ ಜೊತೆಗೆ ಬದಲಾವಣೆ ರೂಪದಲ್ಲಿ ಬರಬೇಕೆಂದು ಹೇಳಿದರು.
ಅಸೋಸಿಯೇಷನ್ ಕಾರ್ಯದರ್ಶಿ ಅನಿಲಕುಮಾರ ಎಸ್ ಹುಮನಾಬಾದ ಅವರು ಪ್ರಾಸ್ತಾವಿವಾಗಿ ಮಾತನಾಡಿದರು. ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ ತೋಟದ ಅವರು ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಸದಸ್ಯರಾದ ಗುರುಪಾದಯ್ಯ ಮಠ, ರಾಚಯ್ಯ ಸಿ. ಪತ್ರೆ, ರಮೇಶ ಎಚ್. ಲಾಲಬುಂದ್ರೆ, ಅನಿಲಕುಮಾರ ಗಣೆಶಕರ್, ಪ್ರಕಾಶ್ ಎಂ ಶೇರಖಾನೆ, ಶಿವಕುಮಾರ್ ಮಾಲಿ ಪಾಟೀಲ್, ಶರಣು ಕಟ್ಟಿಮನಿ ಹಾಗೂ ಹಿರಿಯ ಛಾಯಾಗ್ರಾಹಕರು ಮತ್ತು ಯುವ ಛಾಯಾಗ್ರಾಹಕರು ಉಪಸ್ಥಿತರಿದ್ದರು.