ಛಾಯಾಗ್ರಹಣ ಪರಿಣಾಮಕಾರಿ ಕಲೆ:ಡಾ.ಶ್ರೀಕಾಂತ ಏಖಳೀಕರ

ಕಲಬುರಗಿ,ಆ.19:ಛಾಯಾಗ್ರಹಣ ಕಲೆ ಪರಿಣಾಮಕಾರಿಯಾಗಿದ್ದು ಅದು ತನ್ನದೇ ಆದ ಮಹತ್ವ ಹೊಂದಿದೆ’ ಎಂದು ನೂತನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವ ಡಾ.ಶ್ರೀಕಾಂತ ಏಖಳೀಕರ ಅವರು ಹೇಳಿದರು.
ನಗರದ ನೂತನ ಪದವಿ ಮಹಾವಿದ್ಯಾಲಯದ ಫೈನ ಆರ್ಟ ವಿಭಾಗದಲ್ಲಿ ವಿಶ್ವಛಾಯಾಗ್ರಹಣ ದಿನದ ನಿಮಿತ್ತ ಛಾಯಾಗ್ರಾಹಕ ನಾರಾಯಣ ಎಂ.ಜೋಷಿ ಅವರು ಛಾಯಾಚಿತ್ರಗಳ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಛಾಯಾಗ್ರಹಣವು ಕ್ರಮೇಣವಾಗಿ ಬೆಳೆದು ಬಂದ ಪರಿಯನ್ನು ವಿವರಿಸಿದರು. ಅವರು ಅದಕ್ಕಿರುವ ಮಹತ್ವ ವಿವರಿಸಿದರು. ವೇದಿಕೆಯ ಮೇಲೆ ಆಯ್.ಕ್ಯು.ಎ.ಸಿ.ಯ ಸಂಯೋಜಕರಾದ ಗೋವಿಂದ ಪೂಜಾರ ಸನ್ಮಾನಿತ ಛಾಯಾಗ್ರಾಹಕ ನಾರಾಯಣ ಎಂ.ಜೋಷಿ ಇದ್ದರು.
ನಾರಾಯಣ ಎಂ.ಜೋಷಿ ಛಾಯಾಗ್ರಾಹಕನ ಅನುಭವ ವಿವರಿಸಿದರು. ಫೈನ್ ಆರ್ಟ ವಿಭಾಗದ ಮುಖ್ಯಸ್ಥರಾದ ಜಿತೇಂದ್ರ ಕೊಥಳಿಕರ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಕುಲಕರ್ಣಿ, ರಾಜಕುಮಾರ ಕಾಳೆ, ಎಂ.ಸಂಜೀವ, ಶರಣಪಟ್ಟಣಶೆಟ್ಟಿ, ಯು.ಜಿ.ಸರ್‍ದೇಶಪಾಂಡೆ, ರಮೇಶ ಜೋಷಿ ಅವರು ಉಪಸ್ಥಿತರಿದ್ದರು. ಆಸಕ್ತರು, ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು ಛಾಯಾಚಿತ್ರಗಳನ್ನು ವೀಕ್ಷಿಸಿದರು.