ಛಾಯಾಗ್ರಹಣ, ಕಿರು ವಿಡಿಯೋ ಸ್ಪರ್ಧೆ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.21:- ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರಿನ ಅನ್ವೇಷಿಸದ ತಾಣಗಳು ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಮಟ್ಟದ ಛಾಯಾಚಿತ್ರ ಮತ್ತು ಕಿರು ವಿಡಿಯೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪೆÇೀಸ್ಟರ್ ಬಿಡುಗಡೆ ಮಾಡಿದರು.
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನದಿಗಳು, ಪ್ರಕೃತಿ ಮತ್ತು ರಮಣೀಯ ಸೌಂದರ್ಯ ತಾಣಗಳು, ಜಲಪಾತಗಳು, ವಸ್ತು ಸಂಗ್ರಹಾಲಯಗಳು, ಜಾನಪದ ಹಾಗೂ ಕಲೆಗಳು, ಸಾಂಪ್ರದಾಯಿಕ ಸ್ಥಳೀಯ ಹಬ್ಬಗಳು ಮತ್ತು ಕಲೆಗಳು, ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳು, ಧಾರ್ಮಿಕ ಮತ್ತು ಸಾಹಸ ಪ್ರವಾಸೋದ್ಯಮ ಹಾಗೂ ಇತರೆ ತಾಣಗಳ ರಾಜ್ಯ ಮಟ್ಟದ ಛಾಯಾಗ್ರಹಣ ಮತ್ತು ಕಿರು ವೀಡಿಯೋ ಸ್ಪರ್ಧೆಯಾಗಿದೆ. ಆಯ್ಕೆಯಾದ ಅತ್ಯುತ್ತಮ ಸಲ್ಲಿಕೆಗಳಿಗೆ ಪ್ರಥಮ ಬಹುಮಾನವಾಗಿ 25,000 ರೂ. ದ್ವಿತೀಯ ಬಹುಮಾನ 15,000 ರೂ. ಹಾಗೂ ತೃತೀಯ ಬಹುಮಾನವಾಗಿ 10,000 ರೂ. ಗಳನ್ನು ನೀಡಲಾಗುವುದು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವರಾಜು.ಪಿ, ಪ್ರವಾಸೋದ್ಯಮ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.