ಛಾಯಾಗ್ರಹಕರಿಗೆ ಕೋವಿಡ್ ಲಸಿಕೆ ನೀಡಲು ಒತ್ತಾಯ


ರಾಯಚೂರು.ಜೂ.೦೧- ನಗರ ೩೦೦ ವೃತಿಪರ ಛಾಯಾಚಿತ್ರಗ್ರಾಹಕರಿಗೆ ಲಸಿಕೆಗಳನ್ನು ನೀಡಲು ರಾಯಚೂರು ನಗರ ಫೋಟೋಗ್ರಾಫರ್ ವಿಡಿಯೋಗ್ರಾಫರ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ವೆಲ್ಫೇರ್ ಅಸೋಸಿಯೇಷನ್ ನಲ್ಲಿ ಸುಮಾರು ೩೦೦ ರಿಂದ ೫೦೦ ಛಾಯಾಚಿತ್ರ ಗ್ರಾಹಕರನ್ನು ಹೊಂದಿದ್ದು, ಕೊರೊನಾ ಮಹಾಮಾರಿಯ ಎರಡನೇ ಆಲೆಯಿಂದಾಗಿ ಛಾಯಾಚಿತ್ರಗ್ರಾಹಕರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದು ಸರ್ಕಾರದ ನಿಯಾಮಾನು ಸಾರ ಸ್ಟುಡಿಯೋಗಳು ಮುಚ್ಚಲ್ಪಟ್ಟಿದೆ.ಕೆಲಸವಿಲ್ಲದ ಛಾಯಾಚಿತ್ರಗ್ರಾಹಕರ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ.
ಸರ್ಕಾರವು ಲಾಕ್ ಡೌನ್ ಘೋಷಿಸಿದ್ದರಿಂದ ಹಾಗೂ ಸರ್ಕಾರದ ನಿರ್ಬಂಧದಿಂದ ಮದುವೆಗಳಿಗೆ ಕೇವಲ ೫೦ ಜನರಿಗೆ ಅವಕಾಶ ನೀಡಿರುವುದರಿಂದ ಛಾಯಾಗ್ರಾಹಕರು ಅವರ ಸೇವೆಯನ್ನು ನೀಡುತ್ತಿದ್ದಾರೆ. ಅದರಿಂದ ಛಾಯಾವೃತ್ತಿ ಬಾಂಧವರಿಗೆ ಪ್ರಾಂಟ್ ಲೈನ್ ವಾರಿಯರ್ ಎಂದು ಗುರುತಿಸಿ ಅವರಿಗೆ ಲಂಕೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರಣಬಸವ ಹಿರೇಮಠ, ಮಂಜುನಾಥ, ರಾಮು ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.