ಛಾಯಗ್ರಾಹಕರಿಗೆ ಸಂಘಟಿತರಾಗೋದು ಅನಿವಾರ್ಯ : ಸತ್ಯನಾರಾಯಣ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ16: ವೃತ್ತಿನಿರತ ಛಾಯಗ್ರಾಹಕರು ತಮ್ಮ ಹಕ್ಕುಗಳನ್ನು ಸರ್ಕಾರದ ಮುಂದೆ ಮಂಡನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸತ್ಯನಾರಾಯಣ ಹೇಳಿದರು.
ತುಂಗಭದ್ರಾ ಫೋಟೋ ಮತ್ತು  ವಿಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಶುಕ್ರವಾರ ನಗರದ ರೋಟರಿ ಹಾಲ್‍ನಲ್ಲಿ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ತಂತ್ರಾಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಈ ವೇಗಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕಿದೆ. ಮೊಬೈಲ್‍ಗಳು ಜಗತ್ತಿಗೆ ಕಾಲಿಟ್ಟ ದಿನದಿಂದ ಛಾಯಗ್ರಾಹಕರ ಬದುಕು ಅತಂತ್ರವಾಗಿದೆ. ಈಗ ಪ್ರತಿಯೊಬ್ಬರೂ ಮೊಬೈಲ್‍ನಲ್ಲಿ ಸಣ್ಣ-ಪುಟ್ಟ, ಕಾರ್ಯಕ್ರಮಗಳು ಸೇರಿದಂತೆ ದೊಡ್ಡ, ದೊಡ್ಡ ಸಭೆ-ಸಮಾರಂಭಗಳಲ್ಲಿ ಫೋಟೋಗಳನ್ನು ಸೆರೆ ಹಿಡಿದು ಕಂಪ್ಯೂಟರ್‍ಗಳಲ್ಲಿ ಸಂಗ್ರಹಿಸಿ ಇಡುತ್ತಾರೆ. ಹೀಗಿರುವಾಗ ಅವರಿಗೆ ಫೋಟೋಗ್ರಾಫರ್ ಅವಶ್ಯಕತೆ ಬೀಳುವುದು ತೀರ ಕಡಿಮೆ. ಇತಂಹ ಪರಿಸ್ಥಿತಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೊರೆ ಹೋಗಬೇಕಾಗುತ್ತದೆ. ಇದಕ್ಕಾಗಿ ಛಾಯಗ್ರಾಹಕರು ಸಂಘಟಿತರಾಗಬೇಕಿದೆ ಎಂದು ಸಲಹೆ ನೀಡಿದರು.
ಅಂಚೆ ಇಲಾಖೆ ಅಧೀಕ್ಷಕ ವಿ.ಎಲ್. ಚಿತಕೋಟೆ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಮಹಿಳೆ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಪಿ.ವೆಂಕೋಬ ನಾಯಕ ತುಂಗಭದ್ರಾ ಫೋಟೋ ಮತ್ತು  ವಿಡಿಯೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಜಿ, ತಯೂಬ್ ಹುಸೇನ್, ಕೊಟ್ಟೂರು ತಾಲ್ಲೂಕು ಛಾಯಗ್ರಾಹಕ ಸಂಘದ ಅಧ್ಯಕ್ಷ ಕೊಟ್ರಗೌಡರು, ಪತ್ರಕರ್ತ ಹಾಗೂ ಛಾಯಗ್ರಾಹಕ ಸಂಜಯ್ ಕುಮಾರ್ ಸ್ವಾಗತಿಸಿದರು. ಕುಮಾರಿ ಚೈತ್ರ ನಿರೂಪಿಸಿ, ವಂದಿಸಿದರು.
ಹೊಸಪೇಟೆ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ.ಎಂ.ನರೇಂದ್ರ ನಾಯ್ಕ, ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ರಸೀದ್ ಸಾಹೇಬ್, ಬಳ್ಳಾರಿಯ ಐಪಿಪಿಬಿ ಮ್ಯಾನೇಜರ್ ಚೈತನ್ಯ ಪ್ರಸಾದ್, ಮಾರುಕಟ್ಟೆ ಅಧಿಕಾರಿ ವಿ.ಎಸ್.ಕೃಷ್ಣ, ಅಂಚೆ ಇಲಾಖೆ ವತಿಯಿಂದ ಐಪಿಪಿಬಿ ಅಕೌಂಟ್, ಆಧಾರ್ ನೋಂದಣಿ, ಅಪಘಾತ ವಿಮೆ ಹಾಗೂ ಅಂಚೆ ಕಚೇರಿ ಉಳಿತಾಯ ಖಾತೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

One attachment • Scanned by Gmail