ಛಾಯಗ್ರಾಹಕರಿಗೆ ಗಾಯದ ಮೇಲೆ ಬರೆ

ದಾವಣಗೆರೆ.ಏ.೨೭; ಹದಿನಾಲ್ಕು ದಿನಗಳ ಕಾಲ ಲಾಕ್ಡೌನ್ ಏರಿರುವ ರಾಜ್ಯ ಸರ್ಕಾರವು ಕೂಡಲೇ ಛಾಯಾಗ್ರಾಹಕರಿಗೆ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಮಾಡಿ ನೆರವಿನ ಹಸ್ತ ಚಾಚಬೇಕು ಹಾಗೂ ಛಾಯಾಗ್ರಾಹಕರು ಮತ್ತು ವೃತ್ತಿ ಬಾಂಧವರಿಗೂ ಧನ ಸಹಾಯ ಒದಗಿಸಬೇಕು ಬ್ಯಾಂಕ್ ಮತ್ತು ಇನ್ನಿತರ ಸಾಲಗಳು ಮನ್ನಾ ಮಾಡಬೇಕು ಎಂದು ಹಿರಿಯ ಛಾಯಾಗ್ರಾಹಕ ಎಂ.ಮನು ಒತ್ತಾಯಿಸಿದರು. ಕಳೆದ ವರ್ಷ ಲಾಕ್ ಡಾನ್ ನಿಂದ ಛಾಯಾಗ್ರಾಹಕರು ಮತ್ತು ವೃತ್ತಿ ಬಾಂಧವರು ತುಂಬಲಾಗದ ನಷ್ಟವಾಗಿದೆ ವರ್ಷದಲ್ಲಿ ಕೆಲವೇ ತಿಂಗಳು ಮಾತ್ರ ಛಾಯಾಗ್ರಾಹಕರಿಗೆ ದುಡಿಮೆ ಇರುತ್ತದೆ ಇದನ್ನೇ ನಂಬಿದ ಛಾಯಾಗ್ರಹಕರು ಸಾಲಸೋಲ ಮಾಡಿ ಹೊಸ ಹೊಸ ಕ್ಯಾಮರಗಳು ಪಡೆದಿದ್ದಾರೆ. ಛಾಯಾಗ್ರಾಹಕರ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಮದುವೆ ಮತ್ತು ಶುಭ ಸಮಾರಂಭಗಳು ಇಲ್ಲದೆ ಛಾಯಾಗ್ರಹಕರು ಪರಿಸ್ಥಿತಿ ಬೀದಿಗೆ ಬಂದಂತಾಗಿದೆ ಛಾಯಾಗ್ರಾಹಕರ ಮತ್ತು ವೃತ್ತಿ ಬಾಂಧವರ ಕುಟುಂಬದವರಿಗೆ ಭದ್ರತೆ ಒದಗಿಸಬೇಕು ರಾಜ್ಯದಲ್ಲಿ ಮತ್ತು ದಾವಣಗೆರೆ ನಗರದಲ್ಲಿ ಸರಿಸುಮಾರು ಲಕ್ಷಾಂತರ ಛಾಯಾಗ್ರಾಹಕರು ಇರುತ್ತಾರೆ ಮತ್ತು ವೃತ್ತಿ ಬಾಂಧವರು ಇರುತ್ತಾರೆ ಫೋಟೋ ಸ್ಟುಡಿಯೋಗಳು ನಂಬಿ ಜೀವನ ಸಾಗಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಛಾಯಾಗ್ರಾಹಕರ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಬೇಕು ಛಾಯಾಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡಬೇಕು ಕೂಡಲೇ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.