ಯಾದಗಿರಿ : ಏ.28: ಛಲ, ದೃಢಸಂಕಲ್ಪದ ಪ್ರತೀಕವಾದ ಭಗೀರಥ ಮಹರ್ಷಿಯವರ ದಾರ್ಶನಿಕರ ಜಯಂತಿಯನ್ನು ಸರಕಾರ ಆಚರಣೆಯ ಮೂಲಕ ಅವರ ತತ್ವ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುತ್ತಿದ್ದು, ಮಹನೀಯರ ಜಯಂತಿಯು ಆಚರಣೆ ಜೊತೆಗೆ ಅನುಸರಣೆ ಆಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಭಗೀರಥ ಮಹರ್ಷಿಯವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೆಶಕಿ ಉತ್ತರಾದೇವಿ ಮಠಪತಿ, ಜಿಲ್ಲಾ ಭಗೀರಥ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ಸಮಾಜದ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಗೂಡೂರು, ಸಮಾಜ ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ಕೋಟಗೇರಾ, ನೌಕರರ ಸಂಘದ ಕಾರ್ಯದರ್ಶಿ ರಾಘವೇಂದ್ರ ಐಕೂರ, ಮುಖಂಡರಾದ ಶಿವರಾಜ ಕಿಣಿಕೇರ, ಬಾಲರಾಜ, ತಿಮ್ಮಣ್ಣ ಬಳಿಚಕ್ರ, ರಾಮಲಿಂಗ ಯರಗೋಳ, ಸತೀಶ ಕುಮಾರ ಕಟ್ಟಿಮನಿ, ಕೋಟಗೇರಾದ ಭೀಮರಾಯ, ಶ್ರೀಶೈಲ, ಮೌನೇಶ,ರಾಮಲಿಂಗ ಕನ್ನಳ್ಳಿ, ವೆಂಕಟೇಶ ದೇಸಾಯಿ, ನಿರಂಜನ ಕಿಣಿಕೇರಿ, ರಾಮಕೃಷ್ಣ ಖಾನಾಪುರ, ಕಣಗಲನ ಮುನಿಯಪ್ಪ, ಶ್ರೀಕಾಂತ ಸೇರಿದಂತೆ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.