ಛಲವಾದಿ ಸಮುದಾಯದ ಅಭಿವೃದ್ಧಿಗೆ ಮಹಾಸಭಾ ಸದಾ ಸಿದ್ದ  – ಸಿ. ಮೋಹನ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 21 :- ಛಲವಾದಿ ಸಮುದಾಯ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ  ಸಬಲರಾಗಬೇಕಿದ್ದು ಪ್ರತಿ ಹಂತದ ಅಭಿವೃದ್ಧಿಗೆ ಛಲವಾದಿ ಮಹಾಸಭಾ ಸದಾ ಸಿದ್ದವಿರುವುದಾಗಿ ಕೂಡ್ಲಿಗಿ ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಮೋಹನ್ ತಿಳಿಸಿದರು.
ಅವರು  ತಾಲ್ಲೂಕಿನ ಕುರಿಹಟ್ಟಿ ಗ್ರಾಮದಲ್ಲಿ ಛಲವಾದಿ ಮಹಾಸಭಾ ಗ್ರಾಮ ಘಟಕ ಉದ್ಘಾಟನೆ ನೆರವೇರಿಸಿ ಹಾಗೂ ಗ್ರಾಮ ಘಟಕದ ಅಧ್ಯಕ್ಷ, ಉಪಾಧ್ಯಕ್ಷ , ಹಾಗೂ
ಸದಸ್ಯರನ್ನು ಆಯ್ಕೆಮಾಡುವ ನೇತೃತ್ವ ವಹಿಸಿ ಮಾತನಾಡುತ್ತ ಛಲವಾದಿ ಸಮುದಾಯವು ಸ್ವಾಭಿಮಾನದ ಬದುಕನ್ನು ಕಂಡುಕೊಂಡಿದ್ದು ಅದರಂತೆ ಮಕ್ಕಳನ್ನು ತಪ್ಪದೆ ಶಾಲಾ ಕಾಲೇಜಿಗೆ ಕಳುಹಿಸಿ ಶೈಕ್ಷಣಿಕ ಗುಣ ಹೆಚ್ಚಾದಾಗ ಮಾತ್ರ ಸಮುದಾಯದ ಅಭಿವೃದ್ಧಿ ಹೊಂದಲು ಮೊದಲ ಹೆಜ್ಜೆಯಾಗಲಿದ್ದು ಸರ್ಕಾರದ ಅನೇಕ ಯೋಜನೆಗಳ ಸದುಪಯೋಗ ಪಡೆದುಕೊಂಡು ಸಮಾಜಮುಖಿಯಾಗಿ ಜೀವನ ನಡೆಸಿ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮಾರಪ್ಪ ಮಾತನಾಡಿ  ಯಾವುದೇ ಕಷ್ಟವಿದ್ದರೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದಿರಿ ಅಂತಹ ಸಂದರ್ಭ ಬಂದಲ್ಲಿ ಮಹಾಸಭಾದ ಗಮನಕ್ಕೆ ತಂದಲ್ಲಿ ಸಮುದಾಯದ ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಿಸುವಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು. 
ತಾಲ್ಲೂಕು  ಕಾರ್ಯದರ್ಶಿ ರಾಘವೇಂದ್ರ, ಗ್ರಾಮದ ಹಿರಿಯ ಮುಖಂಡರಾದ ಗೊಂಚಿಗಾರ್ ಓ. ಬೋರಯ್ಯ, ಗೌಡ್ರು ದೊಡ್ಡ ಮಾರಣ್ಣ , ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ
ಜಿ. ಓಬಣ್ಣ , ನಾಗಮ್ಮ ಕೃಷ್ಣಪ್ಪ , ಯುವ ಮುಖಂಡ ಎ.ಡಿ.ನಾಗರಾಜ್ ಹಾಗೂ ಊರಿನ ಯುವ ಮುಖಂಡರು ಕೂಡ್ಲಿಗಿ ತಾಲೂಕಿನ ವಿವಿದ ಗ್ರಾಮಗಳ ಗ್ರಾಮ ಘಟಕಗಳ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಛಲವಾದಿ ಮಹಾಸಭಾ ಎಲ್ಲಾ ಗ್ರಾಮ ಘಟಕದ ಅಧ್ಯಕ್ಷರು ಛಲವಾದಿ ಬಂಧುಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಗ್ರಾಮಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.