ಛಲವಾದಿ ಸಮಾಜ ಮೀಸಲಾತಿ ಪಡೆದಾಗ ಮಾತ್ರ ಅಭಿವೃದ್ಧಿ ಸಾಧ್ಯ

ಲಿಂಗಸುಗೂರು,ಮಾ.೦೪- ತಾಲೂಕಿನಲ್ಲಿ ಜಿಲ್ಲಾ ಛಲವಾದಿ ಸಮಾಜದ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆ. ಶಿವರಾಂರವರು ಸಾಮಾಜ ಅಭಿವೃದ್ಧಿ ಆಗಬೇಕಾದರೆ ರಾಜಕೀಯ ಮೀಸಲಾತಿ ಪಡೆದಾಗ ಮಾತ್ರ ಛಲವಾದಿ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದರ ಮೂಲಕ ರಾಜಕೀಯ ಅಧಿಕಾರ ಪಡೆಯಬೇಕು ಎನ್ನುವುದರ ಮುಖಾಂತರ ಸಾಮಾಜದ ಯುವಕರಿಗೆ ಕರೆ ನೀಡಿದರು.
ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ದಮನಿತ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಸೌಲಭ್ಯ ಒದಗಿಸಲು ಎಲ್ಲಾ ರಾಜಕೀಯ ಪಕ್ಷಗಳು ತುಳಿಯುತ್ತಾ ಬರುತ್ತಿರುವುದು ಖಂಡನಿಯವಾಗಿದೆ. ಕ್ಷೇತ್ರದಲ್ಲಿ ಛಲವಾದಿ ಸಾಮಾಜ ೨೦ ಸಾವಿರ ಜನಸಂಖ್ಯೆ ಹೊಂದಿರುವ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆ.ಶಿವರಾಂರವರು ಮೂರು ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜದ ಜನರು ಎಡ ಬಲ ಮರೆತು ಮಾದಿಗ ಛಲವಾದಿ ಎಂಬ ಭೇದ ಭಾವ ಮಾಡದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವ ಕೆಲಸ ನಮ್ಮನ್ನು ಆಳುವ ಸರ್ಕಾರದ ಒತ್ತಡ ತಂದು ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ೨೦೨೩ರ ಚುನಾವಣೆಯಲ್ಲಿ ಪಕ್ಷ ಬೇಧ ಮರೆತು ಒಂದಾಗಿ ರಾಜಕಾರಣ ಮಾಡಿ ಈ ಕ್ಷೇತ್ರದಲ್ಲಿ ಮೂಲ ಅಸ್ಪುಶ್ಯರ ಗೆಲುವಿಗೆ ಸಹಕಾರಿ ಯಾಗಬೇಕು ಎಂಬುದು ಛಲವಾದಿ ಸಮಾಜದ ಆಶಯವಾಗಿದೆ ನಿವೃತ್ತ ಐಎಎಸ್ ಅಧಿಕಾರಿ ಛಲವಾದಿ ಮಹಾಸಭಾದ ರಾಜ್ಯ ಅದ್ಯೆಕ್ಷ ಕೆ ಶಿವರಾಂ ಇವರು ಪಟ್ಟಣದ ಜ್ಯೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನ್ವಿ ಶಾಸಕ ರಾಜ ವೆಂಕಟಪ್ಪನಾಯಕ, ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಕರಡಕಲ್ ಶರಣಪ್ಪ ಮೇಟಿ, ಎಚ್.ಬಿ ಮುರಾರಿ ಛಲವಾದಿ, ಜಿಲ್ಲಾಧ್ಯಕ್ಷ ಕೆ. ನಾಗಲಿಂಗ ಸ್ವಾಮಿ, ರವಿಂದ್ರನಾಥ ಪಟ್ಟಿ, ರಾಮಕೃಷ್ಣ, ಬಿ. ರಮೇಶ್, ಲಿಂಗಪ್ಪ ಪರಂಗಿ, ಪರುಶುರಾಮ ನಗನೂರ, ಸಂಜೀವಪ್ಪ ಛಲವಾದಿ, ಕೃಷಿ ಉಪನಿರ್ದೇಶಕಿ ಎನ್. ಸರಸ್ವತಿ, ಡಾ. ನಾರಾಯಣಮ್ಮ, ಶಿವಪುತ್ರ ಗಾಣದಾಳ, ಕುಪ್ಪಣ್ಣ ಹೊಸಮನಿ, ಪಂಪಾಪತಿ ಪರಂಗಿ ಸೇರಿದಂತೆ ಸಾವಿರಾರು ಛಲವಾದಿ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.