ಛಲವಾದಿ ಸಮಾಜ ಕಾಂಗ್ರೆಸ್ ಸ್ವತ್ತಲ್ಲ

ಮಾನ್ವಿ,ಏ.೨೭- ಛಲವಾದಿ ಸಮಾಜ ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ ಎಂದು ಛಲವಾದಿ ಸಮಾಜದ ಯುವ ಮುಖಂಡ ಈಶಪ್ಪ ವಕೀಲ ಬೈಲ್ ಮರ್ಚೇಡ್ ಹೇಳಿದರು.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು ಜಿಲ್ಲೆಯ ಛಲವಾದಿ ಸಮಾಜದ ಕೆಲ ಮುಖಂಡರು ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಹೇಳಿಕೆ ನೀಡಿರುವುದು ಖಂಡನೀಯ ಜಿಲ್ಲೆಯ ಛಲವಾದಿ ಸಮಾಜದ ಮುಖಂಡರು ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸ್ಥಾನಮಾನಗಳನ್ನು ಹೊಂದಿದ್ದು ಈ ಮೂರು ಪಕ್ಷಗಳಲ್ಲಿ ಛಲವಾದಿ ಸಮಾಜದ ಮುಖಂಡರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಆದರೆ ಕೆಲ ವ್ಯಕ್ತಿಗಳ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಛಲವಾದಿ ಸಮಾಜವನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಳ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ, ಬಹುದಿನಗಳ ಬೇಡಿಕೆಯಾದ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಜಿಲ್ಲೆಯ ಎಲ್ಲಾ ದಲಿತ ಸಮುದಾಯಗಳು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಛಲವಾದಿ ಸಮಾಜದ ಯುವ ಮುಖಂಡ ಈಶಪ್ಪ ಬೈಲ್ ಮರ್ಚೇಡ್ ವಕೀಲರು ಪತ್ರಿಕೆ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.