ಛಲವಾದಿ ಸಮಾಜ ಕಡೆಗಣಿಸಿದ ತಾಲೂಕ ಆಡಳಿತ

ಕನಕದಾಸ,ಒನಕೆ ಓಬವ್ವ ಜಯಂತಿ ಆಚರಣೆ
ಸಿರವಾರ.ನ.೧೨- ಸರ್ಕಾರ ಘೋಷಣೆ ಮಾಡಿದ ಯಾವುದೇ ಜಯಂತಿಗಳಾಗಲಿ ಆ ಸಮಾಜದ ಮುಖಂಡರನ್ನು, ಸಾಧಕರನ್ನು ಕರೆಯಿಸಿ ಸನ್ಮಾನಿಸುವುದು ವಾಡಿಕೆಯಾಗಿದೆ, ಆದರೆ ಇಂದು ಜರುಗಿದ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿಯಲ್ಲಿ ಕೇವಲ ಹಾಲುಮತ( ಕುರುಬ) ಸಮಾಜದ ಮುಖಂಡರಿಗೆ ಆಹ್ವಾನ ಮಾಡಿ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿರುವುದರಿಂದ ಒನಕೆ ಓಬವ್ವರ ಸಮಾಜವಾದ ಛಲವಾದಿ ಸಮಾಜವನ್ನು ತಾಲೂಕ ಆಡಳಿತ ನಿರ್ಲಕ್ಷ್ಯವ ಹಿಸಿದ್ದಿರಿ ಎಂದು ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಹನುಮಂತ ತಹಸೀಲ್ದಾರ ವಿಜಯೇಂದ್ರಹುಲಿನಾಯಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು. ತಹಸೀಲ್ದಾರ ಕಛೇರಿಯಲ್ಲಿ ಇಂದು ಬೆಳಗ್ಗೆ ಕನಕದಾಸ ಹಾಗೂ ಒನಕೆ ಓಬವ್ವ ಜಯಂತಿ ಅಂಗವಾಗಿ ಎರಡು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವೇದಿಕೆಗೆ ಎರಡೂ ಸಮಾಜದವರನ್ನು ಕರೆಯಬೇಕಾಗಿತು. ಆದರೆ ಕುರುಬ ಸಮಾಜದವರನ್ನು ಮಾತ್ರ ವೇದಿಕೆಗೆ ಆಹ್ವಾನ ಮಾಡಿದರು, ಆಗ ಛಲವಾದಿ ಸಮಾಜದ ಮುಖಂಡರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಹ್ವಾನ ಮಾಡದೆ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿದ್ದಿರಿ ಎಂದು ತಹಸೀಲ್ದಾರಿಗೆ ಕೇಳಿದರು. ಇದಕ್ಕೆ ತಹಸೀಲ್ದಾರ ವಿಜಯೇಂದ್ರಹುಲಿನಾಯಕ ಯಾವುದೇ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲಾಗುತ್ತಿದೆ, ನಾನು ಇಲಿಗೆ ಬಂದಾಗಿನಿಂದಲು ಯಾವುದೇ ಜಯಂತಿ ಇರಲಿ ಆಯಾ ಸಮಾಜದವರಿಗೆ ಮೊದಲು ಆಹ್ವಾನ ನೀಡಿ ಎಂದು ಹೇಳುತ್ತೆನೆ. ಪೂರ್ವಭಾವಿ ಸಭೆಯಲ್ಲಿಯೂ ಸಹ ಇದೇ ಹೇಳಿದೆ, ಸರ್ಕಾರದಿಂದ ಇದು ಮೊದಲ ಜಯಂತಿಯಾಗಿರುವುದರಿಂದ ಹಾಗೂ ಒಂದೇ ದಿನ ಎರಡು ಜಯಂತಿಗಳು ಬಂದಿರುವದರಿಂದ ಈ ರೀತಿಯಾಗಿದೆ.
ಕನಕದಾಸ ಜಯಂತಿಯನ್ನು ನಾಮಪಲಕದ ಮುಂದೆ ಮಾಡುವ ಉದೇಶ ಇತ್ತು. ಆದರೆ ಸಮುದಾಯದವರು ಮರಣ ಹೊಂದಿದ ಕಾರಣ ಎರಡೂ ಇಲಿಯೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನೋಡಿಕೊಳಲಾಗುವುದು, ಸಮಾಜದವರ ಅಬಿಪ್ರಾಯ ತೆಗೆದುಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಯಾರನ್ನು, ಯಾವ ಜಯಂತಿಯನ್ನು ನಿರ್ಲಕ್ಷ್ಯ ಮಾಡುವುದಿಲ ಎಂದರು. ನಂತರ ಶಿಕ್ಚಕ ವೆಂಕಟೇಶ ಜಕ್ಕಲದಿನ್ನಿ ಮಾತನಾಡಿದರು. ನಂತರ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಹಾಲುಮತ ಸಮಾಜದವರಿಗೆ ಸನ್ಮಾನಿಸಲಾಯಿತು. ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಸಂದರ್ಭದಲ್ಲಿ ಕುರುಬ (ಹಾಲುಮತ) ಸಮಾಜದ ತಾಲೂಕ ಅಧ್ಯಕ್ಷ ಶಿವಗ್ಯಾನಿ, ಹೆಚ್.ಕೆ.ಅಮರೇಶ, ರಾಘು, ಎಪಿಎಂಸಿ ಮಾಜಿ ನಾಮ ನಿರ್ದೇಶಕ ಹೆಚ್.ಕೆ.ಅಮರೇಶ,ಹೆಚ್.ಕೆ. ಕರಿಯಪ್ಪ, ಡಾ.ರಾಮಸ್ವಾಮಿ, ನಾಡತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾತ, ವಿ.ಎ ವಿಲ್ಸನ್ ಸೇರಿದಂತೆ ಇನ್ನಿತರರು ಇದ್ದರು.