ಛಲವಾದಿ ಸಮಾಜದ ಸಮಾವೇಶ- ಲಂಕೇಶ ಮರಾಟ

ಸಿರವಾರ,ಫೆ.೨೭- ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾ ಮಟ್ಟದ ಸಮಾವೇಶವನ್ನು ಲಿಂಗಸೂಗೂರ ಪಟ್ಟಣದಲ್ಲಿ ಮಾ.೩ ರಂದು ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾ ಸಿರವಾರ ತಾಲೂಕ ಅಧ್ಯಕ್ಷ ಲಂಕೇಶ(ಹನುಮಂತ) ಮರಾಟ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ಮಹಾಸಭಾದ ರಾಜ್ಯ, ಜಿಲ್ಲಾ, ತಾಲೂಕ ಸಮಿತಿ ರಚನೆ ಮಾಡಿದ ನಂತರ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಮಾರ್ಚ್ ೦೩ ಶುಕ್ರವಾರ ಲಿಂಗಸ್ಗೂರಿನಲ್ಲಿ ಹಮ್ಮಿಕೊಳಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಕ್ಷ ಕೆ.ಶಿವರಾಮ್, ಕೆಪಿಸಿಸಿ ಮಾಜಿ ಅದ್ಯಕ್ಷ ಡಾ.ಜಿ. ಪರಮೇಶ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ,ಮಾಜಿ ಸಚಿವೆ ಮೋಟಮ್ಮ, ಹೆಚ್.ಕೆ.ಕುಮಾರಸ್ವಾಮಿ, ಶಾಸಕ ಕೆ.ಅನ್ನದಾನಿ, ಪ್ರಸಾದಬಾಯಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಹುಚ್ಚಪ್ಪ ವಡವಟಿ ಮಾತಮಾಡಿ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಕೆ.ಶಿವರಾಂ, ಜಿಲ್ಲಾಧ್ಯಕ್ಷ ನಾಗಲಿಂಗಯ್ಯಸ್ವಾಮಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಸಿರವಾರ ತಾಲೂಕಿನಿಂದ ೧೦ ಸಾವಿರಕ್ಕೂ ಅಧಿಕ ಜನರು ಲಿಂಗಸೂಗೂರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಲಿಂಗಸ್ಗೂರು ಎಸ್.ಸಿ ಜಾತಿಗೆ ಮಿಸಲಾತಿ ಇರುವುದರಿಂದ ಈ ಬಾರಿ ೩ ಪಕ್ಷದಿಂದ ಮೂಲ ಅಸ್ಪೃಶ್ಯ ಸಮಾಜಕ್ಕೆ ಟಿಕೆಟ್ ನೀಡಬೇಕು ಒತ್ತಾಯಿಸಲಾಗುವುದು ಎಂದರು.
ಅಮರೇಶ ಹಿರೇಬಾದರದಿನ್ನಿ ಮಾತನಾಡಿ ಈಗಾಗಲೇ ಲಿಂಗಸುಗೂರು ಮಿಸಲು ಕ್ಷೇತ್ರದಲ್ಲಿ ಮಿಸಲಾತಿ ಜಾರಿ ಬಂದಾಗನಿಂದಲೂ ಮೂಲ ಅಸ್ಪೃಶ್ಯರಿಗೆ ಟಿಕೆಟ್ ನೀಡದೆ ವಂಚನೆ ಮಾಡಲಾಗಿದೆ. ಈ ಬಾರಿ ೩ ಪಕ್ಷದಿಂದ ಮೂಲ ಅಸ್ಪೃಶ್ಯದವರಾದ ಛಲವಾದಿ ಹಾಗೂ ಮಾದಿಗ ಸಮಾಜದವರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಲಾಗುವುದು. ಸಮಾವೇಶ ಯಶಸ್ಸಿಗೆ ಜಿಲ್ಲೆ ಎಲ್ಲಾ ತಾಲೂಕಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂರ್ದಭದಲ್ಲಿ ಛಲವಾದಿ ಮಹಾಸಭಾದ ಮುಖಂಡರಾದ ಛಲವಾದಿ ಮಹಾಸಭಾದ ಜಿ.ಕಾ.ಕಾ ಬಾಲಪ್ಪ ಹಳ್ಳಿಹೋಸೂರು, ಮೌನೇಶ ಕೊರಿ ಬಾಲಗವಾಡ, ರಮೇಶ ಜಂಬಲದಿನ್ನಿ,ರಮೇಶ ಕವಿತಾಳ, ರಮೇಶ ಸಿರವಾರ, ಗುರಪ್ಪ ಸಿರವಾರ, ತಿಮ್ಮಣ್ಣ ಮರಾಟ, ಜಗದೀಶ ಬಾಗಲವಾಡ, ರಂಗಸ್ವಾಮಿ ಹೊಕ್ರಾಣಿ, ಮುದಿಯಪ್ಪ ದಳಪತಿ ಹೀರಾ, ದೇವರಾಜ ಕವಿತಾಳ, ಆಂಜನೇಯ್ಯ ಮಾಚನೂರು,ಹನುಮೇಶ ಛಲವಾದಿ ಸೇರಿದಂತೆ ಇನ್ನಿತರರು ಇದ್ದರು.