ಛಲವಾದಿ ಸಮಾಜದ ನಾಯಕ ಕೆ ನಾಗಲಿಂಗ ಸ್ವಾಮಿಗೆ ಟಿಕೆಟ್ ನೀಡಿ

ರಾಯಚೂರು,ಮಾ.೧೬- ಬರುವ ವಿಧಾನಸಭಾ ಚುನಾವಣೆಯಲ್ಲಿ ಲಿಂಗಸೂಗೂರು ಕ್ಷೇತ್ರದಿಂದ ಮೂಲ ಅಸ್ಪೃಶ್ಯ ಸಮಾಜದ ಛಲವಾದಿ ಸಮಾಜದ ನಾಯಕರಾದ ಕೆ. ನಾಗಲಿಂಗ ಸ್ವಾಮಿಯವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮನಂದ್ ಯಾದವ್ ಅವರಿಗೆ ಛಲವಾದಿ ಮಹಾಸಭಾದ ಮುಖಂಡರು ಇಂದು ಮನವಿ ಪತ್ರ ನೀಡಿದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಛಲವಾದಿ ಸಮಾಜದ ಮತದಾರರು ಕನಿಷ್ಠ ೨೫ ರಿಂದ ೩೦ ಸಾವಿರದವರೆಗೆ ಇದ್ದೇವೆ ದೊಡ್ಡ ಸಮಾಜವಾದ ನಮ್ಮ ಸಮುದಾಯಕ್ಕೆ ಏಕೈಕ ಮೀಸಲು ಕ್ಷೇತ್ರವಾದ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ನೀಡಿದ್ದಲ್ಲಿ ನಮ್ಮ ಸಮಾಜಕ್ಕೆ ನ್ಯಾಯ ನೀಡಿದಂತಾಗುತ್ತದೆ ಎಂದು ಭೀಮಣ್ಣ ಮಂಚಾಲ ತಿಳಿಸಿದರು.
ಪರಿಶಿಷ್ಟ ಜಾತಿಗಳ ಪೈಕಿ ಮೂಲ ಅಸ್ಪೃಶ್ಯರಾದ ಮತ್ತು ಬಹುಸಂಖ್ಯಾತರಾದ ನಮ್ಮ ಸಮುದಾಯವನ್ನು ಕಡೆಗಣನೆ ಮಾಡುತ್ತಾ ಬಂದಿರುವುದರಿಂದ ಬೇರೆ ಪಕ್ಷದಿಂದ ದೂರ ಉಳಿಯುತ್ತಿರುವುದು ಅನಿವಾರ್ಯವಾಗಿದೆ,ಆದರೂ ಅತಿ ಹೆಚ್ಚು ಛಲವಾದಿ ಸಮುದಾಯದ ಯುವಕರು ಮುಖಂಡರು ಬಿಜೆಪಿ ಪಕ್ಷದ ಕಡೆ ಮುಖ ಮಾಡಿದ್ದಾರೆ, ಆದ್ದರಿಂದ ಈ ಬಾರಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಛಲವಾದಿ ಸಮಾಜದ ಮುಖಂಡರಾದ ಕೆ. ನಾಗಲಿಂಗ ಸ್ವಾಮಿಯವರಿಗೆ