ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ವಿಸರ್ಜನೆ: ಹೊಸ ಅಧ್ಯಕ್ಷರ ನೇಮಕಕ್ಕೆ ನಿರ್ಧಾರ”


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.10. ಬಳ್ಳಾರಿ ನಗರದ ಸ್ನೇಹ ಸಂಪುಟದ ಕಛೇರಿಯಲ್ಲಿ ಏ.9 ನಿನ್ನೆ ಮಧ್ಯಾಹ್ನ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳ ಛಲವಾದಿ ಮುಖಂಡರು ಸಭೆ ಸೇರಿದ್ದರು. ಸಭೆಯಲ್ಲಿ ಚರ್ಚೆ ನಡೆಸಿ, ಸಮಿತಿಯ ರಾಜ್ಯಾಧ್ಯಕ್ಷರಾದ ಕೆ.ಶಿವರಾಮ್ ಇವರ ಅದೇಶದಂತೆ, ಜಿಲ್ಲಾ ಸಮಿತಿ ಗೌರವ ಅಧ್ಯಕ್ಷ ಹನುಮೇಶಪ್ಪರ ನೇತೃತ್ವದಲ್ಲಿ ಈ ಹಿಂದಿನ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಯನ್ನು ವಿಸರ್ಜಿಸಲು ತೀರ್ಮಾನಿಸಿದರು. ಹೊಸ ಸಮತಿ ರಚನೆಗೆ ಏ.12 ರಂದು ಬುಧವಾರ ದಿನವನ್ನು ನಿಗಧಿಪಡಿಸಿ ಹೊಸ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಿಸಲು ಏ.12ರಂದು ಸಮುದಾಯದ ಇತರೆ ಮುಖಂಡರಿಗೂ ಅಹ್ವಾನ ನೀಡಬೇಕೆಂದು ತೀರ್ಮಾನಿಸಲಾಯಿತು. ಇದೇವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಕಂಪ್ಲಿ, ಸಿರುಗುಪ್ಪ, ಕುರುಗೋಡು, ಬಳ್ಳಾರಿ ತಾಲೂಕುಗಳ ಮತ್ತು ವಿವಿಧ ಗ್ರಾಮಗಳ ಮುಖಂಡರು ಮಾತನಾಡಿ ಕಳೆದೆರಡು ದಿನಗಳ ಹಿಂದೆ ತಾವು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷನಾಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ನಮ್ಮ ಸಮುದಾಯದವರು ನಿಮ್ಮ ಪಕ್ಷಕ್ಕೇ ಓಟು ಹಾಕಬೇಕೆಂದು ತಿಳಿಸುತ್ತೇನೆಂದು ಕಂಪ್ಲಿ ಶಾಸಕ ಜಿ.ಗಣೇಶ್ ಇವರಿಗೆ ಹೇಳಿಕೆ ನೀಡಿರುವುದು, ಸಾಲದೇ ಕಂಪ್ಲಿಯವರೆಗೆ ತೆರಳಿ ಅಲ್ಲಿನ ಸಮುದಾಯದ ಮುಖಂಡರಿಗೆ ಮಾಹಿತಿ ನೀಡದೇ, ಶಾಸಕರಿಗೆ ತಮ್ಮ ಮಾತನ್ನೂ ಮತ್ತೊಮ್ಮೆ ಖಚಿತಪಡಿಸಿ ಸನ್ಮಾನ ಮಾಡಿಸಿಕೊಂಡು ಬಂದಿರುವುದನ್ನು ಸಭೆಯಲ್ಲಿ ಖಂಡಿಸಿದರು.
ತಮ್ಮ ವೈಯುಕ್ತಿಕ ಲಾಭಕ್ಕಾಗಿ, ಜಿಲ್ಲೆಯ ಎಲ್ಲಾ ಛಲವಾದಿ ಸಮುದಾಯದವರು ತಮ್ಮ ಕೈಯಲಿದ್ದಾರೆಂಬ ರೀತಿಯಲ್ಲಿ, ಒಂದು ಪಕ್ಷಕ್ಕೆ ಸಮುದಾಯದವರನ್ನು ಒತ್ತೆ ಇಡುವ ಕೆಲಸ ಮಾಡಲು ಇವರಿಗೆ ಯಾವ ನೈತಿಕತೆ ಇದೆ. ಆ ಅಧಿಕಾರ ಇವರಿಗೆ ನೀಡಿದವರಾರು. ಕೆಲವೇ ನಾಲ್ಕಾರು ಜನರನ್ನು ಜೊತೆಗಿಟ್ಟುಕೊಂಡು ಸಮುದಾಯದ ಸಂಘವನ್ನು ಉಪಯೋಗಿಸಿಕೊಳ್ಳುವ ಇವರ ನಡೆಯನ್ನು ಖಂಡಿಸಿ ಈ ವಿಷಯದ ಮೇಲೆ ಮತ್ತು ರಾಜ್ಯಾಧ್ಯಕ್ಷರ ಆದೇಶದಂತೆ ಇಲ್ಲಿಯವರೆಗಿನ ಜಿಲ್ಲಾ ಸಮಿತಿಯನ್ನು ವಿಸರ್ಜನೆ ಮಾಡಲು ಮುಖಂಡರು ತೀರ್ಮಾನಿಸಿದರು. ಸಭೆಯಲ್ಲಿ ಮುಖಂಡರಾದ ಬಳ್ಳಾರಿಯ ಹನುಮೇಶಪ್ಪ, ಸುಂಕಪ್ಪ, ವೆಂಕಟೇಶ್, ಹನುಮೇಶ್, ಶಿವಕುಮಾರ, ಓಂಕಾರಪ್ಪ, ಜಯರಾಮ, ಮಧುರಾಜ್, ಗೋನಾಳು ಶೇಕಣ್ಣ, ರಾಜಶೇಖರ, ಕಂಪ್ಲಿಯಿಂದ ಸಿ.ಆರ್.ಹನುಮಂತ, ನಾಗೇಂದ್ರ, ದೇವೇಂದ್ರ, ಮಹೇಶ್, ರಾಮಸ್ವಾಮಿ, ವಿರುಪಾಕ್ಷಪ್ಪ, ಸಿರುಗುಪ್ಪ ತಾಲೂಕಿನಿಂದ ಜಿ.ತಿಮ್ಮಯ್ಯ, ಶಿವರಾಮ್, ಕುರುಗೋಡು ಹೊನ್ನೂರಪ್ಪ, ನಾಗರಾಜ, ಇತರರು ಪಾಲ್ಗೊಂಡಿದ್ದರು.