
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ಮಾನವನ ಮಹೋನ್ನತ ಸಾಧನೆಗೆ ಸತತ ಪರಿಶ್ರಮ,ಸಾಧಿಸಬೇಕೆಂಬ ಛಲವು ಪ್ರಮುಖ ಕಾರಣವಾಗಿರುತ್ತದೆ.ಛಲವಿಲ್ಲದವರನ್ನು ದೇವರೂ ಕೂಡಾ ಮೆಚ್ಚುವುದಿಲ್ಲವೆಂದು ಎಸ್,ಜಿ,ಟಿ,ಕಾಲೇಜಿನ ಕನ್ನಡ ಉಪನ್ಯಾಸಕರಾದ ಕೃಷ್ಣಪ್ಪನವರು ನುಡಿದರು.
ಸಂಗನಕಲ್ಲಿನ ಶ್ರೀಬಸವೇಶ್ವರ ಪ್ರೌಢ ಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 281ನೇ ಮಹಾಮನೆ ಲಿಂಟಟಸಂಗನಕಲ್ಲು ದೊಡ್ಡ ಶರಣಪ್ಪ ಹಂಪಮ್ಮ ದತ್ತಿ ಕಾರ್ಯಕ್ರಮದಲ್ಲಿ “ವೇಷವ ಧರಿಸಿ ಫಲವೇನಯ್ಯ…”ಎಂಬ ಸೊನ್ನಲಿಗೆಯ ಸಿದ್ಧರಾಮನ ವಚನ ಕುರಿತು ಮಾತನಾಡುತ್ತಾ,ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿರವ ಬೇಕು.
ಸೋಲನ್ನು ಗೆಲುವಿನಂತೆಯೇ ಸಹಜವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಪ್ರಯತ್ನಕ್ಕೆ ತಕ್ಕಫಲದೊರೆಯದಿದ್ದಾಗ ಅದಕ್ಕೆ ಅನ್ಯರು ಕಾರಣವೆಂದು ಭಾವಿಸದೇ ನಮ್ಮ ಪ್ರಯತ್ನದ ಕೊರತೆಯೆಂಬುದಾಗಿ ಭಾವಿಸಿ,ಹೆಚ್ಚೆಚ್ಚು ಪ್ರಯತ್ನಶೀಲರಾಗಿ ಗುರಿಯೆಡೆಗೆ ಸಾಗಬೇಕು ಎಂದರು.
ಸದಾಶಿವ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಎಸ್,ಬಸವನಗೌಡ ಮೇಟಿ ಯವರು ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಂಗನಕಲ್ಲಿನಲ್ಲಿ ಪ್ರೌಢ ಶಾಲೆಯನ್ನು ಪ್ರಾರಂಭಿಸಿದ ಕಾಲಘಟ್ಟದಲ್ಲಿ ಇದ್ದ ಅಡ್ಡಿ,ಆತಂಕ,ಅಡಚಣೆಗಳನ್ನು ವಿವರಿಸುತ್ತಾ ಛಲಬಿಡದ ಸಾಧನೆಯಿಂದ ,ಇಂದು ಪ್ರೌಡಶಾಲೆ ನೂರಾರು ಬಡ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಯಿತು ಎಂದರು.
ಪ್ರೌಢಶಾಲೆಯ ಮುಖ್ಯಗುರುಗಳಾದ ಜಿ,ವೆಂಕಟೇಶ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಗನಕಲ್ಲಿನಲ್ಲಿ ಪ್ರೌಢಶಾಲೆ ತಲೆಯೆತ್ತಲು ಮೂಲ ಕಾರಣರಾದ. ಎಸ್.ಬಸವರಾಜಗೌಡ ಮೇಟಿಯವರ ತ್ಯಾಗ,ಪರಿಶ್ರಮ ಗಳನ್ನು ಸ್ಮರಿಸುತ್ತಾ ,ಸಂಬಳವಿರದಿದ್ದ ಸಂದರ್ಭದಲ್ಲಿ ಮೇಟಿ ಗೌಡರು,ಅನ್ನ,ಆಶ್ರಯ ನೀಡಿದ ಮಹಾ ದಾಸೋಹಿ ಗಳೆಂದು ಬಣ್ಣಿಸಿದರು.
ಕುಟ್ಟ ಮಾನಸ ಪ್ರಾರ್ಥನೆ ಮಾಡಿದರು.ಹಿಂದಿ ಶಿಕ್ಷಕ ಪಕೃದ್ದೀನರು ಸ್ವಾಗತ ಕೋರಿದರು.ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಧಾತೃಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.ಸಭೆಯಲ್ಲಿ ಊರಿನ ಗಣ್ಯರಾದ ವಿರೂಪಾಕ್ಷ ಗೌಡ,ಶ್ರೀಗುರುದಾಮದ ಜಯರಾಮ್. ಮುಂತಾದವರು ಉಪಸ್ಥಿತರಿದ್ದರು.ಶಾಲೆಯ ಎಲ್ಲಾ ಶಿಕ್ಷಕ/ಕಿ,ಬೋಧಕೇತರ ಸಿಬ್ಬಂದಿಗೆ ಮೇಟಿ ಬಸವರಾಜ ಗೌಡರು ಶಾಲುಹೊದಿಸಿ ಸನ್ಮಾನ ಮಾಡಿದರು.
ವೇದಿಕೆಯ ಅತಿಥಿಗಳನ್ನು ಸನ್ಮಾನಿಸಿ,ಮಕ್ಕಳಿಗೆ ವಚನ ಪುಸ್ತಕಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮ ಮಂಗಲವಾಯಿತು.
One attachment • Scanned by Gmail