ಛಲದಿಂದ ಮುನ್ನಡೆದಾಗ ಗುರಿ ಮುಟ್ಟಲು ಸಾಧ್ಯ:ಸಾವಳಗಿ

ತಾಳಿಕೋಟೆ:ಫೆ.12: ಪ್ರತಿಯೊಬ್ಬ ವಿಧ್ಯಾರ್ಥಿಯ ಬಳಿಯು ಛಲವೆಂಬುದು ಇರಬೇಕು ಈ ಛಲವೆಂಬುದು ಶಿಕ್ಷಣದಲ್ಲಿ ಹಠವಾಗಿ ಪರಿಣಮಿಸುವದರೊಂದಿಗೆ ಮುನ್ನಡೆದಾಗ ನಿಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರು ಹೇಳಿದರು.
ಪಟ್ಟಣದ ಮೈಲೇಶ್ವರ ಕ್ರಾಸ್‍ನ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯರೂಪಣೆಗೆ ದೇಹತ್ಯಾಗ ಮಾಡಿದ ದಿ.ಎಂ.ಎಂ.ಬಿರಾದಾರ ಅವರ ಸ್ಮರಣಾರ್ಥ ಶನಿವಾರರಂದು ಹಮ್ಮಿಕೊಳ್ಳಲಾದ 2024ರ ಬ್ರಿಲಿಯಂಟ್ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಓದಿನಲ್ಲಿ ಹಾಗೂ ಸ್ಪರ್ದಾತ್ಮಕ ಪರಿಕ್ಷೆಗಳನ್ನು ಎದುರಿಸುವಲ್ಲಿ ವಿಧ್ಯಾರ್ಥಿಗಳು ಯಾವಾಗಲು ಹಿಂಜರಿಯಬಾರದು ಯಾವುದೇ ಪರಿಕ್ಷೆಗಳು ಬಂದರೂ ಕೂಡಾ ಅದನ್ನು ಎದುರಿಸುವ ನಿಟ್ಟಿನಲ್ಲಿ ಛಲವನ್ನು ಹೊಂದಬೇಕು ಕಠಿಣ ಪರಿಶ್ರಮದೊಂದಿಗೆ ಓದಿದ ಅಕ್ಷರ ನಿಮ್ಮನ್ನು ಯಾವತ್ತಿಗೂ ಕೈಬಿಡುವದಿಲ್ಲಾ ಓದಿನಲ್ಲಿ ಆಸಕ್ತಿ ಎಂಬುದು ಅಳವಡಿಸಿಕೊಂಡು ಪರಿಕ್ಷೆಗೆ ಸಿದ್ದರಾದರೆ ನಿಮ್ಮ ಜೀವನದಲ್ಲಿ ಗುರಿ ಎಂಬುದನ್ನು ಮುಟ್ಟಲು ಸಾಧ್ಯವಾಗಲಿದೆ ಕಠಿಣ ಪರಿಶ್ರಮದ ಅಧ್ಯಯನಕ್ಕೆ ಯಾವತ್ತಿಗೂ ಮುಂದಾಗಿರುವ ಬ್ರಿಲಿಯಂಟ್ ಶಾಲೆಯ ಶಿಕ್ಷಕರು ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವದರೊಂದಿಗೆ ಸಾಧಿಸಿದ ಛಲ ಎಲ್ಲರ ಕಣ್ಣೆದುರಿಗೆ ಇದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಶೈಕ್ಷಣಿಕವಾಗಿ ವಿಧ್ಯಾರ್ಥಿಗಳಿಗೆ ತುಂಬುತ್ತಿರುವ ದೈರ್ಯ, ಆತ್ಮಸ್ಥೈರ್ಯ ಮೆಚ್ಚುವಂತಹದ್ದಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉತ್ತರ ಕನ್ನಡ ಜಿಲ್ಲೆಯ ವಿಶ್ವದರ್ಶನ ಕಾಲೇಜಿನ ಪ್ರಾಚಾರ್ಯ ಡಾ. ದತ್ತಾತ್ರೇಯ ಗಾಂವ್ಕರ ಅವರು ಮಾತನಾಡಿ ಈ ಮೊದಲು ಉತ್ತಮ ಶಿಕ್ಷಣಕ್ಕೆ ಆಳ್ವಾಸ್, ಮುಡಬಿದರೆ ಎಂಬ ಹೆಸರುಗಳು ಕೇಳಿಬರುತ್ತಿದ್ದವು ಆದರೆ ಈಗ ವಿಜಯಪುರ ಜಿಲ್ಲೆಯಲ್ಲಿ ತಾಳಿಕೋಟೆ ತಾಲೂಕಿನ ಬ್ರಿಲಿಯಂಟ್ ಶಾಲೆ ಒಳಗೊಂಡು ಅನೇಕ ಶಾಲೆಗಳು ಉತ್ತಮ ಶಿಕ್ಷಣಕ್ಕೆ ಒತ್ತು ನೀಡುವದರೊಂದಿಗೆ ರಾಜ್ಯದಲ್ಲಿ ಹೆಸರು ಮಾಡಿರುವದು ಉತ್ತಮ ಬೆಳವಣಿಗೆಯಾಗಿದೆ ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರಿಕ್ಷೆಯಲ್ಲಿ ರಾಜ್ಯಕ್ಕೆ 6 ಜನ ವಿಧ್ಯಾರ್ಥಿಗಳು ಏಕಕಾಲಕ್ಕೆ ಪ್ರಥಮ ಸ್ಥಾನ ಪಡೆಯುವದರೊಂದಿಗೆ ಇಡೀ ರಾಜ್ಯವೇ ಬ್ರಿಲಿಯಂಟ್ ಶಾಲೆಯತ್ತ ಮುಖಮಾಡಿದ್ದನ್ನು ನಾವು ಕಂಡಿದ್ದೇವೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡುತ್ತಿರುವ ಈ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಅತಿಥಿ ಚಿಕ್ಕೋಡಿ ಸಿಎಲ್‍ಇ ಸಂಸ್ಥೆಯ ಬಿ.ಸಿ.ಗಂಗಾಲ ಶಿಕ್ಷಣ ಮಹಾ ವಿಧ್ಯಾಲಯದ ಪ್ರಾಚಾರ್ಯ ಡಾ.ಸುರೇಶ ಉಕ್ಕಲಿ ಮಾತನಾಡಿ ಕೇವಲ ಶಿಕ್ಷಣ ಕಲಿತರೆ ಸಾಲದು ಪಡೆದ ಶಿಕ್ಷಣ ಮೌಲ್ಯಯುತವಾಗಿ ಸಮಾಜಕ್ಕೆ ಅರ್ಪಣೆಯಾಗಬೇಕು ಆ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಸಾಗಿರುವ ಬ್ರಿಲಿಯಂಟ್ ಶಾಲೆಯ ಶಿಕ್ಷಕರ ಕಾರ್ಯ ಸಂತಸ ತಂದಿದೆ ಎಂದರು.
ಎಸ್.ಎಸ್.ವಿಧ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಹಣಗಳಿಕೆಗಾಗಿ ಶಿಕ್ಷಣ ನೀಡುತ್ತಿಲ್ಲಾ ಮೌಲ್ಯಯುತವಾದ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸುತ್ತದೆ ಎಂಬುದನ್ನು ಅರೀತುಕೊಂಡು ಉತ್ತಮ ಶಿಕ್ಷಣ ನೀಡುತ್ತಿವೆ ಎಂದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ ಕೊಡೇಕಲ್ಲ ದುರದುಂಡೇಶ್ವರ ಹಿರೇಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಒಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ದಿ ಹೊಂದಬೇಕಾದರೆ ಉತ್ತಮ ಶಿಕ್ಷಣದ ಅಗತ್ಯವಿದೆ ಶಿಕ್ಷಣದಿಂದ ನೈತಿಕ ಮೌಲ್ಯಗಳ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ತಾಳಿಕೋಟೆ ಭಾಗದ ಶಿಕ್ಷಣ ಸಂಸ್ಥೆಗಳು ವಿದ್ಯಾ ಕಾಶಿಯಾಗುತ್ತಿರುವದು ಸಂತಸದ ವಿಷಯವಾಗಿದೆ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆಯ ಮೂಲಕ ದೇಶದ ಉನ್ನತ ಸ್ಥಾನದ ಅಧಿಕಾರದಲ್ಲಿ ತೊಡಗಲಿ ಎಂದು ಹಾರೈಸಿದರು.
ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ. ನಡುವಿನಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಕಳೆದ ಸಾಲಿನಲ್ಲಿ ಉತ್ತಮ ಅಂಕಗಳಿಸಿದ ಮತ್ತು ವಿವಿಧ ಸ್ಪರ್ದೆಗಳಿಗೆ ವಿಜೇತರಾದ ವಿಧ್ಯಾರ್ಥಿಗಳಿಗೆ, ಸಂಸ್ಥೆಯ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಸಿ.ಆರ್.ಸಿ.ರಾಜು ವಿಜಾಪೂರ, ಶಿಕ್ಷಣ ಸಂಯೋಜಕ ಎಸ್.ಎಸ್. ಹಿರೇಮಠ, ಕಾರ್ಯದರ್ಶಿ ಎಂ.ಬಿ ಮಡಿವಾಳರ, ನಿರ್ದೇಶಕರಾದ ಎಸ್.ಎಚ್.ಪಾಟೀಲ. ಶ್ರೀಮತಿ.ಎಲ್.ಎಂ. ಬಿರಾದಾರ, ಶ್ರೀಮತಿ ಎನ್.ಎಸ್.ಗಡಗಿ, ಶಶಿಧರ ಬಿರಾದಾರ, ಮುಖ್ಯ ಶಿಕ್ಷಕ ವಿನಾಯಕ ಪಟಗಾರ, ಮೊದಲಾದವರು ಇದ್ದರು.
ಮುಖ್ಯ ಶಿಕ್ಷಕ ಸಿದ್ದು ಕರಡಿ ಸ್ವಾಗತಿಸಿ ನಿರೂಪಿಸಿದರು.