ಛಬ್ಬಿ ಹೊರದುರಗಮ್ಮನ ಜಾತ್ರೆ ದಿ. 14ರಂದು

ಶಿರಹಟ್ಟಿ,ಮಾ13: ಪ್ರತಿ ಮೂರು ವರ್ಷಕ್ಕೊಮ್ಮೆ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಶ್ರೀ ಹೊರದುಗಮ್ಮದೇವಿಯ ಜಾತ್ರೆಯು ನೆರವೇರುತ್ತದೆ. ಇದೇ ಶಾಲಿವಾಹನ ಶೆಕೆ 1944 ನೇ ಶುಭಕೃತ ಸಂವತ್ಸರ ಪಾಲ್ಗುಣ ಅನುರಾಧಾ ನಕ್ಷತ್ರ ದಿ.14ಮಂಗಳವಾರ ಮತ್ತು ದಿ.15 ಬುಧವಾರ ದಂದು ಬಹು ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವು ಜರಗುವುದು.
ಗ್ರಾಮದ ಮತ್ತು ಹೊರವಲದಲ್ಲಿರುವ ಸರ್ವರಿಂದ ಛಬ್ಬಿ ಹೊರದುರಗಮ್ಮದೇವಿಗೆ ಪೂಜೆಯನ್ನು ನೆರವೇರಿಸುತ್ತಲಾಗುತ್ತದೆ. ಸಾಕಷ್ಟು ಶಕ್ತಿ ಮಹಿಮಳಾದ ಶ್ರೀ ದೇವಿ ಭಕ್ತರ ಇಷ್ಟಾರ್ಥಗ¼ನ್ನು ಈಡೇರಿಸುವುದರಿಂದ ಗ್ರಾಮದ ಸುತ್ತಮುತ್ತಲಿನ ಜನರೆಲ್ಲ ಪಾದ ಯಾತ್ರೆ ನಡೆಸಿ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಹರಕೆಯನ್ನು ತೀರಿಸುತ್ತಾರೆ.