ಛತ್ರಪತಿ ಶಿವಾಜಿ ೩೯೭ ನೇ ಜಯಂತಿ ಆಚರಣೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೧೯- ಹಿಂದೂ ಧರ್ಮದ ರಕ್ಷಣೆ ಹೊತ್ತು ತನ್ನ ತಾಯಿ ಮಾನವ ಸಮಾಜದ ಕುಲ ತಿಲಕ ಛತ್ರಪತಿ ಶಿವಾಜಿ ಅವರ ೩೯೭ ನೇ ಜಯಂತಿಯನ್ನು ಆಚರಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿ ಅವರ ದಿಟ್ಟ ನಿರ್ಧಾರಗಳನ್ನು ,ದೇಶಪ್ರೇಮ ವನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸ ನಮ್ಮಿಂದಾಗಬೇಕು ಮತ್ತು ಪ್ರತಿಯೊಬ್ಬರೂ ಹಿಂದೂ ನಾಡು-ನುಡಿಗಾಗಿ ಪಣ ತೊಡಬೇಕು ಎಂದು ಮಾತನಾಡಿದರು ಹಾಗೂ ಬೆಂಗಳೂರಿನ ಕೆಕೆಎಮ್‌ಪಿ ಕೇಂದ್ರ ಕಛೇರಿ ಯಲ್ಲಿ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಿದರು.
ರಾಜ್ಯಾದ್ಯಕ್ಷರಾದ ಎಸ್.ಸುರೇಶ ರಾವ್ ಸಂತೆ, ಟಿ.ಆರ್ ಸುನೀಲ್ ಚವ್ಹಾಣ್, ವಿಠಲಗ ರಾವ್ ಗಾಯಕವಾಡ, ವಿನೋದ ವಂಶಿ, ರವಿ ಸಾವಂತ, ನಾರಾಯಣ ರಾವ್ ಸೆವಕರ್, ನಾಗೇಶರಾವ್, ಮಂಜುನಾಥ ಕೆಸರ್ಕರ್, ಚಂದ್ರರಾವ್, ನಾಗೋಜಿರಾವ್ ಕರೊಡೆ, ಸಿಂಧನೂರು ಕಛೇರಿಯಲ್ಲಿ ಮಧ್ವ ರಾಜ ಆಚಾರ್ಯ, ಶಿವಬಸನಗೌಡ, ಯಲ್ಲೊಸಾ ಬದಿ, ತಿಮ್ಮರಡ್ಡಿ, ರವಿ ಉಪ್ಪಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.