ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಬೀದರ: ಫೆ.21:ಬೀದರಿನ ಹಳೇ ನಗರದಲ್ಲಿರುವ ಕಸ್ತೂರೀಬಾಯಿ ಟ್ರಸ್ಟ್ (ರಿ) ಬೀದರ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಟ್ರಸ್ಟೀನ ಅಧ್ಯಕ್ಷರಾದ ಯೋಗೇಶ ಢಗೆ, ಜೇಸ್ಕಾಂ ನಿವೃತ್ತ ನೌಕರರಾದ ನಂದಕುಮಾರ ಕಾಂಬಳೆ, ಸಿಪಿಐ ಪಕ್ಷದ ಹಿರಿಯ ಕಾರ್ಯಕರ್ತರಾದ ಪ್ರಭು ಬಗದಲ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ದೀಪ ಪ್ರಜ್ವಲಿಸಿ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿ ಅಧ್ಯಕ್ಷರಾದ ಯೋಗೇಶ ಢಗೆ ಯವರು ಛತ್ರಪತಿ ಅವರ ಬಗ್ಗೆ ಹಿತನುಡಿಗಳನ್ನು ನುಡಿದರು.