ಛತ್ರಪತಿ ಶಿವಾಜಿ ಮಹಾರಾಜರು ಯುವಕರಿಗೆ ಸ್ಫೂರ್ತಿ:ಶಂಕರಗೌಡ ಬಿರಾದಾರ

ಬಸವನಬಾಗೇವಾಡಿ:ಫೆ.20:ಛತ್ರಪತಿ ಶಿವಾಜಿ ಮಹಾರಾಜರ ನಡೆಸಿದ್ದ ಉತ್ತಮ ಆಡಳಿತ ಮತ್ತು ಅವರ ಶೌರ್ಯ ನಮಗೆ ಸದಾ ಸ್ಫೂರ್ತಿ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಹೇಳಿದರು ಪಟ್ಟಣದ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯ ಸಂಘಟನೆ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯೋಂತೋತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆಯ ಸಲ್ಲಿಸಿ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ ಶಿವನೇರಿ ಎಂಬಲ್ಲಿ 1630ನೆ ಫೆಬ್ರವರಿ 19ರಂದು ಜನಸಿದರು ಪ್ರಾಥಮಿಕ ಶಿಕ್ಷಣವನ್ನು ಅಣ್ಣ ಸಾಂಬಾಜಿ ಅವರಿಂದ ಪಡೆದು ದಾದಾಜಿ ಕೊಂಡದೇವ ಅವರಿಂದ ಸಂಪೂರ್ಣ ಯುದ್ಧ ಕೌಶಲ್ಯ ಕಲಿತರು 12ನೆಯ ವಯಸ್ಸಿನಲ್ಲಿ ಕತ್ತಿವರಸೆ,ಕುದರೆ ಸವಾರಿಯಲ್ಲಿ ಪಳಗಿದ್ದರು 1674ರಲ್ಲಿ ಮರಾಠಾ ಸಾಮರಾಜ್ಯ ಸ್ಥಾಪಿಸಿ 1680ರವರೆಗೆ ಶೌರ್ಯದಿಂದ ರಾಜ್ಯವನ್ನು ಆಳಿದವರು ಶಿವಾಜಿ ಮಹಾರಾಜರು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗದೆ ಧಾರ್ಮಿಕ ಸಹಿಷ್ಣುಹಿಯಾಗಿದ್ದರು.ತಮ್ಮ ಆಡಳಿತ ಅವದಿಯಲ್ಲಿ ಹಿಂದೂ ಮುಸ್ಲಿಂ ಅನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು ಎಲ್ಲ ಧರ್ಮದವರಿಗೂ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದ್ದರು ಭಾರತದ ಭೂಮಿಅನಾದಿಕಾಲದಿಂದಲೂ ಅನೇಕ ಬಲಿಷ್ಠ ಧೈರ್ಯವಂತ್,ವೀರ ಯೋಧರು ಸಾಹಸಿ ವನಿತೆಯರು ಆಡಳಿತಗಾರನ್ನು ಹೊಂದಿದೆ ತಮ್ಮ ತಾಯಿನಾಡು ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ತ್ಯಾಗ ಬಲಿಧಾನ ಮಾಡಿದ್ದಾರೆ ಅಂತಹ ಮಹಾನ್ ಧ್ಯರ್ಯಸಾಲಿ ರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಒಬ್ಬರು ಅವರ ಧೈರ್ಯಶಾಲಿ ಬುದ್ಧಿವಂತಿಕೆಯಿಂದ ಮರಾಠಾ ಸಾಮಜ್ರ್ಯವನ್ನು ಕಟ್ಟಿದವರು ಶಿವಾಜಿ ಮಹಾರಾಜರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಅಂತ ಹೇಳಿದರು ಈ ಸಂದರ್ಭದಲ್ಲಿ ರಾಷ್ಟೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ ತಾಲೂಕ ಅಧ್ಯಕ್ಷ ಸಂಜು ಬಿರಾದಾರ್ ಸುನೀಲಗೌಡ ಚಿಕ್ಕೊಂಡ ಜಟ್ಟಿಂಗರಾಯ ಮಾಲಗಾರ ನಿಂಗಪ್ಪ ಅವಟಿ ಮಹಾಂತೇಶ ಹೆಬ್ಬಾಳ ಮೀರಸಾ ಕೊರಬು ಪ್ರವೀಣ ಪೂಜಾರಿ ಶಂಕರ ರಜಪೂತ ಬದ್ರು ಮಣೂರ ವಿವೇಕ ಜೋಗಿ ಮಂಜುನಾಥ ಚಿಕ್ಕೊಂಡ ಬಸವರಾಜ ಗೊಳಸಂಗಿ ನಿಂಗಪ್ಪ ಕುಳಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು