ಛತ್ರಪತಿ ಶಿವಾಜಿ ಆದರ್ಶ ಅನುಸರಿಸಿ

ಭಾಲ್ಕಿ:ಫೆ.20: ಛತ್ರಪತಿ ಶಿವಾಜಿ ಮಹಾರಾಜರು ಸರ್ವಜಾತಿ ಮತ್ತು ಸರ್ವಧರ್ಮ ಸಹಿಷ್ಣು ಮನೋಭಾವ ಹೊಂದಿದ್ದರು ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ಹೇಳಿದರು. ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಶಿವ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ತಾಯಿ ಜೀಜಾಬಾಯಿ ಅವರು ಭೋಧಿಸುತ್ತಿದ್ದ ಧೈರ್ಯದ ಮಾತುಗಳಿಂದ ಪ್ರೇರಿತರಾದ ಶಿವಾಜಿ ಅವರು ಚಿಕ್ಕವಯಸ್ಸಿನಲ್ಲಿಯೇ ಹಲವು ಸಂಗತಿಗಳನ್ನು ಕಲಿತರು. ಉತ್ತಮ ವ್ಯಕ್ತಿತ್ವ ರೂಪಿಸಿ ಕೊಂಡಿದ್ದ ಶಿವಾಜಿ ಅವರಿಗೆ ಬಡವರು, ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅವರ ಆದರ್ಶ ವಿದ್ಯಾರ್ಥಿಗಳು ಅನುಸರಿಸಿ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ರವಿ ಬಿರಾದಾರ, ಮಧುಕರ ಗಾಂವಕರ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.