ಛತ್ರಕೋಡಿಹಳ್ಳಿ ಹಾಲಿನ ಸಂಘಕ್ಕೆ ಅವಿರೋಧ ಆಯ್ಕೆ

ಕೋಲಾರ,ಸೆ,೧೯- ತಾಲ್ಲೂಕಿನ ಛತ್ರಕೋಡಿ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯು ಅವಿರೋಧವಾಗಿ ಎಲ್ಲಾ ನಿರ್ದೇಶಕರು ಸೇರಿ ಅಧ್ಯಕ್ಷರನ್ನು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು. ಅದರೆ ಹೊರಗಿನವರು ಬಂದು ಹಾಲಿನ ಸಂಘದಲ್ಲಿ ಹುಳಿ ಹಿಂಡುವ ಹಾಗೂ ಊರಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿ ಚುನಾವಣೆಯ ಸತ್ಯಾಂಶಕ್ಕೆ ದೂರವಾದ ಸಂಗತಿಗಳನ್ನು ಮಾದ್ಯಮಗಳಿಗೆ ನೀಡಿ ಅಪಪ್ರಚಾರ ಮಾಡಿದ್ದಾರೆ ಎಂದು ನಿರ್ದೇಶಕ ರಾಮಕೃಷ್ಣೇಗೌಡ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಯಾರೋ ಹೊರಗಿನವರು ತಮ್ಮ ರಾಜಕೀಯದ ತೆವಲಿಗೆ ನಮ್ಮ ಸಂಘದಲ್ಲಿ ಸೆ,೬ ರಂದು ನಡೆದ ಅಧ್ಯಕ್ಷ ಸ್ಥಾನದ ಅವಿರೋಧ ಆಯ್ಕೆಯನ್ನು ಚುನಾವಣೆ ನಡೆದಂತೆ ಬಿಂಬಿಸಿ, ಅಕಾಂಕ್ಷಿಯಾಗಿದ್ದ ನನಗೆ ಮುಖಭಂಗವಾಗಿದೆ ಎಂದು ಮಾದ್ಯಮಗಳಿಗೆ ತಪ್ಪು ಮಾಹಿನಿ ಅಪಪ್ರಚಾರ ಮಾಡಿರುವುದರಿಂದ ಗ್ರಾಮಕ್ಕೆ ಬೆಂಕಿ ಹಚ್ಚಿದಂತ ವಾತವರಣ ಸೃಷ್ಠಿಯಾಗಿದೆ ಎಂದು ಕಳವಳ ವ್ಯಕ್ತ ಪಡೆಸಿದರು,
ಕೋಲಾರ ತಾಲ್ಲೂಕಿನಲ್ಲಿ ನಮ್ಮ ಛತ್ರಕೋಡಿ ಹಳ್ಳಿ ಹಾಲಿನ ಉತ್ಪಾದಕರ ಸಹಕಾರ ಸಂಘದಲ್ಲಿ ೩೩ ಲಕ್ಷದವರೆಗೆ ಬ್ಯಾಂಕಿನ ಠೇವಣಿ ಇದೆ. ಎಲ್ಲಾ ಸಂಘಗಳಿಗಿಂತ ಹೆಚ್ಚಿನ ದರವನ್ನು ನೀಡಲಾಗುತ್ತಿದೆ. ನಮ್ಮ ಸಂಘದಲ್ಲಿ ೯೦೦ ಲೀಟರ್ ಉತ್ಪಾದನೆ ಮಾಡುತ್ತಿದೆ. ಸ್ಥಳೀಯವಾಗಿಯೇ ನಮಗೆ ಹೆಚ್ಚಿನ ಗ್ರಾಹಕರು ಇದ್ದಾರೆ. ನಮ್ಮ ಸಂಘದಲ್ಲಿ ಯಾವೂದೇ ಅವ್ಯವಹಾರಗಳಿಗೆ ಅವಕಾಶ ಇಲ್ಲದಂತೆ ಆಡಳಿತ ನಿರ್ವಾಹಣೆಯನ್ನು ಮುಂದುವರೆಸಿ ಕೊಂಡು ಬಂದಿದ್ದೇವೆ. ಏನೇ ಸಮಸ್ಯೆಗಳಿದ್ದರೂ ನಾವೆಲ್ಲಾ ಕೊತು ಬಗೆ ಹರಿಸಿ ಕೊಂಡು ಬಂದಿರುವುದು ಈ ಹಿಂದಿನಿಂದಲೂ ಇದ್ದು ಈಗಾಲು ಮುಂದುವರೆಸಿ ಕೊಂಡು ಗ್ರಾಮದ ಒಗ್ಗಟ್ಟನ್ನು ಕಾಪಾಡಿ ಕೊಂಡು ಬಂದು ಮಾದರಿಯಾಗಿದ್ದೇವೆ ಎಂದು ಹೆಮ್ಮೆಯಿಂದ ನುಡಿದರು,
ತಾಲ್ಲೂಕು ಸೊಸೈಟಿ ಮಾಜಿ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ ಗ್ರಾಮದಲ್ಲಿ ಯಾವೂದೇ ರೀತಿ ಪಕ್ಷ ಬೇಧವಿಲ್ಲದೆ ಅವಿರೋಧ ಆಯ್ಕೆಯಾಗಿತ್ತು. ಅದರೆ ಅಧ್ಯಕ್ಷರು ಹಾಗೂ ಕೆಲವು ನಿರ್ದೇಶಕರು ಸಹಜವಾಗಿ ಸಿ.ಎಂ.ಆರ್. ಶ್ರೀನಾಥ್ ಅವರ ಜೂತೆ ಫೋಟು ತೆಗೆಸಿ ಕೊಂಡು ಬಂದಿದ್ದಾರೆ ನಾವು ಈ ಚುನಾವಣೆಯಲ್ಲಿ ಯಾವೂದೇ ಪಕ್ಷವನ್ನು ಪರಿಗಣಿಸದೆ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ನೂತನ ಅಧ್ಯಕ್ಷ ವೆಂಕಟೇಶಗೌಡ ಮಾತನಾಡಿ ನಾನು ಸಿಎಂಆರ್ ಶ್ರೀನಾಥ್ ಬಳಿ ಯಾವೂದೇ ರಾಜಕೀಯದಿಂದ, ಯಾವೂದೇ ಪಕ್ಷವನ್ನು ದೃಷ್ಠಿಯಲ್ಲಿಟ್ಟು ಹೋಗಿಲ್ಲ ನಾವೆಲ್ಲಾ ಸಹಜವಾಗಿ ಹೋಗಿದ್ದೇವು ನಮಗೆ ಯಾವೂದೇ ರಾಜಕೀಯದ ಭಾವನೆಗಳಿರಲ್ಲಿಲ್ಲ ಅದರೆ ಇದನ್ನೆ ಕೆಲವರು ಬಂಡಾವಳ ಮಾಡಿಕೊಂಡು ತಪ್ಪಾಗಿ ಅರ್ಥೈಸಿ ಮಾದ್ಯಮಗಳಲ್ಲಿ ಪ್ರಚಾರವಾಗಿರುವುದಕ್ಕೆ ವಿಷಾಧಿಸುವುದಾಗಿ ತಿಳಿಸಿದರು,
ನಮ್ಮ ಸಂಘದಲ್ಲಿ ಯಾವೂದೇ ಪಕ್ಷ, ಜಾತಿ ಭೇದಗಳಿಲ್ಲದೆ ಸಂಘವನ್ನು ಅಭಿವೃದ್ದಿ ಪಡೆಸುವುದಷ್ಟೆ ನಮ್ಮ ಕಾಳಜಿಯಾಗಿದೆ. ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇದ್ದೇವೆ ದಯವಿಟ್ಟು ಒಡೆದು ಆಳಲು ಪ್ರಯತ್ನಿಸ ಬೇಡಿ ನಾವು ಮುಗ್ದ ಜನತೆ ನಮ್ಮಲ್ಲಿ ಯಾವೂದೇ ಕಲ್ಮಷ ಇಲ್ಲದ ನಿರ್ಮಾಲ ಮನಸ್ಸಿನವರು ಎಂದು ತಿಳಿಸಿದರು,