ಛತ್ತೀಸ್‌ಘಡ ೨೦೦ ಚುನಾವಣಾ ಸಿಬ್ಬಂದಿ ನಾಪತ್ತೆ

ಬಿಜಾಪುರ, (ಛತ್ತೀಸ್‌ಘಢ), ನ. ೯- ನಕ್ಸಲ್ ಬಾಧಿತ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ೨೦೦ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಈ ಘಟನೆ ಆಂತಕಕ್ಕೆಡೆ ಮಾಡಿಕೊಟ್ಟಿದೆ.
ಮಂಗಳವಾರ ಮೊದಲ ಹಂತದ ಮತದಾನ ಮುಗಿದು ೨೪ ತಾಸುಗಳಿಗೂ ಹೆಚ್ಚು ಸಮಯ ಮುಗಿದಿದ್ದರೂ ನಕ್ಸಲ್ ಬಾಧಿತ ಬಿಜಾಪುರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ೨೦೦ಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಆದರೆ ಇದುವರೆಗೂ ಚುನಾವಣಾ ನಿಯಂತ್ರಣ ಕೊಠಡಿಗೆ ಮಾಹಿತಿ ಲಭ್ಯವಾಗಿಲ್ಲ.
ನಕ್ಸಲೀಯರು ಮತದಾನ ಬಹಿಷ್ಕರಿಸಲು ಕರೆ ಕೊಟ್ಟಿದ್ದರು. ನಕ್ಸಲ್ ಬೆದರಿಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರತ್ಯೇಕ ಸಮಯದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ಬಿಜಾಪುರದಲ್ಲಿ ಶೇ. ೪೦.೯೮ ಮತದಾನ ದಾಖಲಾಗಿತ್ತು.
ಮತಗಟ್ಟೆ ತಂಡದ ೨೦೦ಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ಇದುವರೆಗೂ ಚುನಾವಣಾ ನಿಯಂತ್ರ ಕೊಠಡಿಗೆ ವರದಿ ಸಲ್ಲಿಸಲಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಭದ್ರತೆ ದೃಷ್ಟಿಯಿಂದ ಕೆಲ ಸಿಬ್ಬಂದಿಗಳನ್ನು ಹೆಲಿಕಾಫ್ಟರ್ ಮೂಲಕ ಮತಗಟ್ಟೆಗಳ ಸಮೀಪ ತಿಳಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಆಂಜನೇಯ ವೈಷ್ಣವ್ ನಕ್ಸಲ್ ರು ಮತಗಟ್ಟೆ ಸಿಬ್ಬಂದಿಯನ್ನು ಅಪಹರಿಸಿದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ. ೭೬ ಸ್ಥಳಗಳಲ್ಲಿ ಹೆಲಿಕಾಫ್ಟರ್ ಮೂಲಕ ಸಿಬ್ಬಂದಿಯನ್ನು ಮತಗಟ್ಟೆಗೆ ರವಾನಿಸಿದ್ದೇವೆ. ಅವರ ಭದ್ರತೆಯ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಈ ಮಧ್ಯೆ ಮೊದಲ ಹಂತದ ಮತದಾನದ ವೇಳೆ ನಕ್ಸಲರ ಘಟನೆಗಳಿಗೆ ಸಾಕ್ಷಿಯಾಗಿತ್ತು. ಸುಕ್ಮಾ ಜಿಲ್ಲೆಯ ಚಿಂತಗುಪಾ ಪೊಲೀಸ್ ಠಾಣೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ನಾರಾಯಣಪುರ, ಬಿಜಾಪುರ ಹಾಗೂ ಕಂಕೇರ್ ಜಿಲ್ಲೆಗಳಲ್ಲಿ ನಕ್ಸಲೀಯರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆದಿದೆ. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.