ಛತ್ತೀಸಗಢ ಬಸ್ತಾರ್ ನಕ್ಸಲರ ದಾಳಿ ಖಂಡಿಸಿ ಎ.ಬಿ.ವಿ.ಪಿ ಪ್ರತಿಭಟನೆ

ವಿಜಯಪುರ, ಏ.8-ಛತ್ತೀಸಗಢದ ಬಸ್ತಾರ್ ಅರಣ್ಯ ಪ್ರದೇಶದಲ್ಲಿ ಮಾವೋವಾದಿ ನಕ್ಸಲರು ನಡೆಸಿದ ದಾಳಿಯನ್ನು ಖಂಡಿಸಿ ನಕ್ಸಲಿಯರ ದಾಳಿಗೆ ದಿಕ್ಕಾರ, ವೀರ ಜವಾನ ಅಮರ ರಹೇ, ಭಾರತೀಯ ಸೈನ್ಯಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದ ಅಂಭೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ಭಾರತೀಯ ಸೇನೆಯ ಮೇಲೆ ನಕ್ಸಲರ ದಾಳಿ ನಡೆಯತ್ತಿರುವುದು ಖಂಡನೀಯ, ್ಲ ನಕ್ಸಲ ಹಾವಳಿ ನಿರ್ಮೂಲನೆಗೆ ಒಂದು ನಿರ್ಣಾಯಕ ಕಾರ್ಯತಂತ್ರವನ್ನು ತಯಾರಿಸುವ ಅವಶ್ಯಕತೆ ಇದೆ, ಕೇಂದ್ರ ಸರಕಾರ ನಕ್ಸಲಿಯರನ್ನು ಬೇರು ಮಟ್ಟದಿಂದ ಕಿತ್ತು ಹಾಕುವ ಕಾರ್ಯವನ್ನು ಮಾಡಬೇಕಿದೆ, ಹೊರಗಿನ ಭಯೋತ್ಪಾದಕರ ಜೊತೆ ನಮ್ಮೋಳಗೆ ಇರುವ ಭಯೋತ್ಪಾದಕರು ಹತ್ತಿಕ್ಕಬೇಕು, ನಮ್ಮಲಿರುವ ಇಂತಹ ದೇಶವಿರೋಧಿಗಳನ್ನು ಹೊಡೆದುಳಿಸುವ ನಿಟ್ಟನಲ್ಲಿ ಸರಕಾರವೂ ಮುಂದಾಗಭೇಕು ಎಂದರು.
ನಗರ ಕಾರ್ಯದರ್ಶಿ ಸಿದ್ದು ಪತ್ತಾರ ಮಾತನಾಡಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ 22 ಯೋಧರಿಗೆ ಶೃಂಧ್ದಾಜಲಿ ಸಲ್ಲಿಸಿದರು, ದೇಶದ ವಿಷಯ ಸೈನಿಕರ ವಿಷಯ ಬಂದಾಗ ಸದಾ ಯುವಕರಾದ ನಾವೆಲ್ಲ ಅವರ ಜೊತೆ ನಿಲ್ಲೋಣ, ಬಾರತೀಯ ಸೈನಿಕರ ಕುಟುಂಬಗಳ ಕಷ್ಟದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಸಹಾಯ ಮಾಡುವ ಮನಸ್ಥಿತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳೊಣ, ವಿಶ್ವದಲ್ಲಿ ಭಾರತೀಯ ಸೇನೆಯೂ ಎಂದೂ ಸಹಿತ ಮೊದಲು ದಾಳಿ ಮಾಡಿದ ಉದಾಹರಣೆಗಳಿಲ್ಲ ಎಂದರು.
ಈ ಸಂದರ್ಭದಲ್ಲಿ ಎಬಿವಿಪಿಯ ಮುಖಂಡರಾದ ಬಸವರಾಜ ಲಗಳಿ, ಅಕ್ಷಯ ಯಾದವಾಡ, ಪಾಂಡು ಮೊರೆ, ಮಲ್ಲಿಕಾರ್ಜನ ಮಾಳಿ, ನಚಿಕೇತ, ಕಿರಣ, ಮಂಜುನಾಥ, ಅಭಿಷೇಕ ಗುಡದಿನ್ನಿ, ಪ್ರಕಾಶ ಹೊಸಕೋಟೆ, ಸಮೀರ ಕುಲಕರ್ಣೆ, ಶಿವಾನಂದ ಗೌಡರ, ನಾಗೇಶ ಇಂಚಗೇರಿ, ಶಿವಾನಂದ ಕೋಲ್ಕಾರ, ಸಂತೋಷ ಸೋನ್ನದ ಇತರರು ಇದ್ದರು.