ಚೌಡೇಶ್ವರಿ ಜಾತ್ರೆ:ಪಲ್ಲಕ್ಕಿ ಮೆರವಣಿಗೆ

ಕಲಬುರಗಿ,ಜೂ.6-ಅಫಜಲಪೂರ ತಾಲೂಕಿನ ಸುಕ್ಷೇತ್ರ ಅರ್ಜುಣಗಿ ಗ್ರಾಮ ದೇವತೆಯಾದ ಶ್ರೀಮಾತಾ ಚೌಡೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ಸಕಲ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಗಣ್ಯ ಮಾನ್ಯ ವ್ಯಕ್ತಿಗಳು ಗ್ರಾಮದ ಸಕಲ ಸದ್ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಈ ಗ್ರಾಮದ ವೈಶಿಷ್ಟ ಜಾತ್ರೆಯೆಂದರೆ ಚೌಡೇಶ್ವರಿ ಬೆಳ್ಳಿ ಬಾಳ ಬಟ್ಟಲು ಕಾರ್ಯಕ್ರಮವನ್ನು ಸಡಗರ ಸಂಭ್ರಮದೊಂದಿಗೆ ಬಹು ಕಾಲಾಂತರದಿಂದ ಈ ಜಾತ್ರೆ ನಡೆದು ಬಂದಿರೋದು ವಿಶೇಷ. ಸುತ್ತಮುತ್ತಲಿನ ಗ್ರಾಮಗಳಾದ ಬಡದಾಳ, ಕುಲಾಲಿ, ಯಳಸಂಗಿ, ರೇವೂರ, ಮಾಡ್ಯಾಳ, ನಿಂಬಾಳ ನೆರೆ ಗಡಿ ಗ್ರಾಮವಾದ ದುದನಿ ಅಲ್ಲದೆ ಇನ್ನೂ ಅನೇಕ ಗ್ರಾಮದ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ಚೌಡೇಶ್ವರಿ ದರ್ಶನ ಆಶೀರ್ವಾದ ಪಡೆದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ,್ಷ ಕಾರ್ಯದರ್ಶಿ ಸರ್ವ ಸದಸ್ಯರು ಉಪಸ್ಥಿತರಿದ್ದರು.