ಚೌಡಾಪುರ : ಸಸ್ಯ ರೋಗ ಕೃಷಿ ತರಬೇತಿ

ಕಲಬುರಗಿ:ಡಿ.3:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು ಕೃಷಿ ಮಹಾವಿದ್ಯಾಲಯ ಕಲಬುರಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಚೌಡಾಪುರದಲ್ಲಿ ಗ್ರಾಮೀಣ ಕೃಷಿ ಕೆಲಸದ ಅನುಭವ ಕಾರ್ಯಕ್ರಮವನ್ನು ನಡೆಯಿತು. ಕಾರ್ಯಕ್ರಮದ ಅಂಗವಾಗಿ ತೊಗರಿ, ಕಬ್ಬು, ಹತ್ತಿ, ಮೆಣಸಿನಕಾಯಿ, ಕಲ್ಲಂಗಡಿ ವಿವಿಧ ರೋಗಗಳ ಮಾಹಿತಿ ಮತ್ತು ಅದನ್ನು ನಿಯಂತ್ರಿಸುವ ಮಾರ್ಗಗಳನ್ನು ರೈತರಿಗೆ ನೀಡಲು ಸಮಗ್ರ ರೋಗ ನಿರ್ವಹಣೆ ತರಬೇತಿ ಕಾರ್ಯಕ್ರಮ ನಡೆಯಿತು. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಾ.ಜಹೀರ್ ಅಹ್ಮದ್ ಅವರು ಸಮಗ್ರ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ತೊಗರಿ ಒಣ ಬೇರು ಕೊಳೆ, ಫೈಟೊಪೆÇ್ಥೀರಾ ಕೊಳೆ ರೋಗ, ಹತ್ತಿ ಕೆಂಪಾಗುವುದು, ಕಲ್ಲಂಗಡಿ, ಸೂರ್ಯ ಕಾಂತಿ ವೈರಸ್ ನಂಜು ರೋಗ ಮತ್ತು ಕಬ್ಬಿನಲ್ಲಿ ಸುಳಿರೋಗ . ರಾಸಾಯನಿಕ ಹಾಗೂ ಪರಿಸರ ಸ್ನೇಹಿ ವಿಧಾನಗಳಿ0ದ ರೋಗಗಳ ನಿರ್ವಹಣೆಯನ್ನು ವಿವರಿಸಿದರು. ಎರೆ ಜಲ, ಔಷಧ ಸಿಂಪಡಿಸಲು ಡ್ರೊನ್ಗಳ ಬಳಕೆ, ಬೀಜ ಬಿತ್ತನೆಯ ಮೊದಲು ಬೀಜಪಚಾರ ಮತ್ತು ರಾಸಾಯನಿಕಗಳ ಸುರಕ್ಷಿತ ಬಳಕೆ, ಜೈವಿಕ ಕೃಷಿ ಕಾಂಪೆÇೀಸ್ಟ್ ಘಟಕಗಳನ್ನು ಸ್ಥಾಪಿಸಲು ಯುವ ರೈತರಿಗೆ ಪ್ರೇರೇಪಿಸಿದರು. ಕಾರ್ಯಕ್ರಮದಲ್ಲಿ ಡಾ. ಕೆ ಎನ್ ದೊಡ್ಡಮನಿ, ಡಾ ನಿಂಗಪ್ಪ ಸರ್, ಡಾ ಮಂಜುನಾಥ ನಾಟೇಕರ್ ಉಪಸ್ಥಿತರಿದ್ದರು. ರೈತರ ಬೆಳೆ ರೋಗ ಸಮಸ್ಯೆ ಹತೋಟಿಗೆ ಗ್ರಾಮೀಣ ಕಾರ್ಯಾಗಾರ ಉತ್ತಮ ಸ್ಪಂದನೆ ದೊರೆತಿದೆ.ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಚೌಡಾಪುರದಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಥಳಿಯ ರೈತ ಸಂಪರ್ಕ ಕೇಂದ್ರ, ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಲವು ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಕಬ್ಬು ಕಟಾವು ಕಾರ್ಯ ಹಾಗೂ ಕಬ್ಬು ಟ್ರಕ್ ಲಾರಿಗಳು ಕಾರ್ಖಾನೆ ಗೆ ಸಾಗಾಟ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಹವಾಮಾನ ಬದಲಾವಣೆ ಕುರಿತು ಮಾಹಿತಿ ನೀಡಿದರು.