
ತಾರಾ ದಂಪತಿ ನಮಿತಾ ರಾವ್ ಮತ್ತು ವಿಕ್ರಂ ಸೂರಿ ದಂಪತಿಯ ಹೊಸ ಪ್ರಯತ್ನ ” ಚೌಕಾಬಾರಾ” ಚಿತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ನಾಯಕಿ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ನಮಿತಾ ರಾವ್. ಪತಿ ವಿಕ್ರಂ ಸೂರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಚೌಕಾಬಾರದ ಮತ್ತೊಂದು ವಿಶೇಷತೆ ಎಂದರೆ ಕಾದಂಬರಿ ಆಧಾರಿತ ಚಿತ್ರ ಮಾಡಿರುವುದು ಈ ದಂಪತಿಯ ಹೆಗ್ಗಳಿಕೆ.ಜೊತೆಗೆ ಹಿರಿಯ ಕವಿಗಳಾಧ ಎಚ್.ಎಸ್ ವೆಂಕಟೇಶಮೂರ್ತಿ ಮತ್ತು ಬಿ.ಆರ್ ಲಕ್ಷ್ಮಣ ರಾವ್ ಅವರ ಬಳಿ ಹಾಡಿಗೆ ಸಾಹಿತ್ಯ ಬರೆಸಿದ್ದಾರೆ.
ಚಿತ್ರದ ಟ್ರೈಲರ್ ಬಿಡುಗಡೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ಕವಿಗಳಾದ ಎಚ್.ಎಸ್ ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷಣ ರಾವ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.
ನಟಿ,ನಿರ್ಮಾಪಕಿ ನಮಿತಾ ರಾವ್ ಮಾತನಾಡಿ, ಕಾದಂಬರಿ ಆದರಿತ ಚಚಿತ್ರವನ್ನು ಜನರಮುಂದೆ ಇಡುತ್ತಿದ್ದೇವೆ.ಚಿತ್ರತಂಡ ಚಿತ್ರೀಕರಣ ಸಮಯದಲ್ಲಿ ನೀಡಿದ ಸಹಕಾರ ಎಂದಿಗೂ ಮರೆಯಲು ಆಗದು. ಸ್ನೇಹಿತರಿಗಾಗಿ ಸಿನಿಮಾ ಮಾಡಿದ್ದೇವೆ ಎಂದರು.ಡ
ಅಮೇರಿಕಾ, ದುಬೈ ನಲ್ಲಿ ತಿಂಗಳಾಂತ್ಯಕ್ಕೆ ಚಿತ್ರ ಬಿಡುಗಡೆ ಆಗಲಿದೆ ಇದೊಂದು ಟೀಮ್ ವರ್ಕ್ ಎಂದರು. ನಿರ್ದೇಶಕ ವಿಕ್ರಂ ಸೂರಿ, ಕಷ್ಡಪಟ್ಟರೆ ಬೆಲೆ ಸಿಕ್ಕೆ ಸಿಗುತ್ತದೆ ಎಂದು ಮಾಹಿತಿ ಹಂಚಿಕೊಂಡರು
ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟ,ನಟಿ ಸೇರಿದಂತೆ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಹಾಜರಿತ್ತು. ನಮಿತಾ ಮತ್ತು ವಿಕ್ರಮ್ ಸೂರಿ ಅದ್ಬುತ ಪ್ರಯತ್ನ ಮಾಡಿದ್ದಾರೆ.