ಚೋಳೆನಹಳ್ಳಿ-ಬಿಜವರ ಕೆರೆಗೆ ಎಂವಿವೀ ಬಾಗಿನ

ಮಧುಗಿರಿ, ನ. ೨೨- ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿರುವುದು ಸಂತೋಷದ ವಿಚಾರ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ಚೋಳೆನಹಳ್ಳಿ ಕೆರೆ ಹಾಗೂ ಬಿಜವರ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಕೆರೆಗಳು ಮೈದುಂಬಿ ಹರಿಯುತ್ತಿದ್ದು ಸುಮಾರು ೭ ದಿನಗಳಿಂದ ಕೋಡಿ ಹರಿಯುತ್ತಿರುವುದು ಒಳೆಯ ಸೂಚನೆ ಮತ್ತು ಚೋಳೆನಹಳ್ಳಿ ಕೆರೆ ತುಂಬಿರುವುದರಿಂದ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಹಾಗೂ ರೈತರಿಗೆ ಅನುಕೂಲವಾಗಲಿದ್ದು ಇದರಿಂದ ರೈತರಿಗೆ ಮುಂದಿನ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.
ನೀತಿ ಸಂಹಿತೆ ಜಾರಿ ಇರುವುದರಿಂದ ಯಾವುದೇ ಅಧಿಕಾರಿಗಳನ್ನು ಇಲ್ಲಿ ಅಹ್ವಾನಿಸಿಲ್ಲ. ಕಾನೂನು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯೆ ಎಂದರು.
ಪುರಸಭಾ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಸುಮಾರು ದಿನಗಳಿಂದ ಸುರಿದ ಬಾರಿ ಮಳೆಯಿಂದಾಗಿ ಚೋಳೆನಹಳ್ಳಿ ಕೆರೆ ಕೋಡಿ ಬಿದ್ದಿದ್ದು ರೈತರಿಗೆ ಹಾಗೂ ಸಾರ್ವಜನಕರಿಗೆ ಅನುಕೂಲವಾಗಲಿದೆ. ಪಟ್ಟಣಕ್ಕೆ ನೀರು ಒದಗಿಸುವ ಈ ಕೆರೆಗಳು ತುಂಬಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರು ಗಳಾದ ಎಂ.ಆರ್.ಜಗನ್ನಾಥ್, ನರಸಿಂಹಮೂರ್ತಿ, ಮುಖಂಡರಾದ ತುಂಗೋಟಿ ರಾಮಣ್ಣ, ಟಿ.ಜಿ. ಗೋವಿಂದರಾಜು, ಕಂಬತ್ತನಹಳ್ಳಿ ರಘು, ಶಫಿವುಲ್ಲ, ಶ್ರೀನಿವಾಸ್, ಪ್ರಭು, ಶಿವಪ್ಪ, ರಘು, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.