ಚೋರನೂರಿನಲ್ಲಿ ರೈತರಿಗೆ ಹಿಂಗಾರು ಬೆಳೆ ಸಮೀಕ್ಷೆ ಸರಣಿ

ಸಂಡೂರು :ಜ:7 ತಾಲ್ಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ರೈತ ಸಂಪರ್ಕ ಕೇಂದ್ರ ವತಿಯಿಂದ 2020-21ನೇ ಸಾಲಿನ ಆತ್ಮಯೋಜನೆ ಅಡಿಯಲ್ಲಿ ಚೋರನೂರಿನ ಸುತ್ತಮುತ್ತಲಿನ ರೈತರಿಗೆ ಅನುಕೂಲಕರವಾಗಲೆಂದು ಹಿಂಗಾರು ಬೆಳೆಗೆ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಹಾಗೂ ಹಿಂಗಾರು ಬೆಳೆ ಸಮೀಕ್ಷೆ ಸರಣಿ ತರಬೇತಿಯು ಚೋರನೂರಿನಲ್ಲಿ ಒಂದೇ ಅಲ್ಲದೇ ಅಗ್ರಹಾರ, ಗೆಣತಿಕಟ್ಟಿ, ಸೋವೇನಹಳ್ಳಿ, ಕಾಳಿಂಗೇರಿ, ಡಿ. ಮಲ್ಲಾಪುರ ಗ್ರಾಮದ ರೈತರಿಗೂ ತರಬೇತಿ ನೀಡಲಾಯಿತು. ರೈತರು ಸಮಗ್ರ ಮಾಹಿತಿಯನ್ನು ಪಡೆದುಕೊಂಡ ನಂತರ ತಮ್ಮ ಅನುಭವಗಳನ್ನು ಪತ್ರಕರ್ತರ ಮುಂದೆ ಹಂಚಿಕೊಂಡು ಖುಷಿ ಪಟ್ಟರು. ತರಬೇತಿ ಆಯೋಜಿಕರಾದ, ಸಹಾಯಕ ಕೃಷಿ ಅಧಿಕಾರಿಗಳಾದ ರಮೇಶ್ ವಡ್ಡಟ್ಟಿ, ಆತ್ಮಯೋಜನೆಯ ಸಿಬ್ಬಂದಿಯವರಾದ ಚೈತ್ರ ಪಾಟೇಲ್, ಹಾಗೂ ಸಿದ್ದಾರ್ಥ ಉಪಸ್ಥಿತರಿದ್ದರು.