ಚೋರನೂರಿನಲ್ಲಿ ಉತ್ತಮ ಬಿತ್ತನೆ ಸಂಡೂರಿನಲ್ಲಿ ಮಳೆ ಕಡಿಮೆ


ಸಂಜೆವಾಣಿ ವಾರ್ತೆ
ಸಂಡೂರು: ಜು:20 : ಸಂಡೂರು ತಾಲೂಕಿನ ಮೂರು ಹೋಬಳಿಗಳಲ್ಲಿ ವಾಡಿಕೆಯಂತೆ ಸಂಡೂರು ಹೋಬಳಿಯಲ್ಲಿ 273ಮಿ.ಮೀ. ಅಗಬೇಕಾಗಿದ್ದು 144 ಮಿ.ಮೀ. ಮಾತ್ರ ಮಳೆಯಾಗಿದೆ, 47% ಕೊರತೆ ಇದೆ, ಅದೇ ರೀತಿ ಚೋರನೂರು ಹೋಬಳಿಯಲ್ಲಿ 202ಮಿ.ಮೀ. ಮಳೆಯಾಗಬೇಕಾಗಿದ್ದು 26% ಕೊರತೆ ಇದೆ, ತೋರಣಗಲ್ಲಿನಲ್ಲಿ 191 ಮಿ.ಮೀ. ವಾಡಿಕೆಯಂತೆ ಮಳೆಯಾಗಬೇಕಾಗಿದ್ದು 72 ಮಿ.ಮೀ ಮಳೆಯಾಗಿದೆ. 62% ಕೊರತೆಯಾಗಿದೆ. ಸಂಡೂರಿನಲ್ಲಿ ಮಳೆಯ ಪ್ರಭಾವ ಬರೀ ಅಂತರದಲ್ಲಿ ಕಡಿಮೆಯಾಗಿದ್ದು ಈಗ ಎರಡು ದಿನ ಮಳೆಬರುತ್ತಿದ್ದು ರೈತರು ತಮ್ಮ ಭೂಮಿಗಳಲ್ಲಿ ಬಿತ್ತನೆಗಾಗಿ ಹಸನಮಾಡಿಕೊಳ್ಳುತ್ತಿದ್ದಾರೆ, ತೋರಣಗಲ್ಲಿನಲ್ಲಿ ಮೂರು ದಿನದಿಂದ ಉತ್ತಮಮಳೆಯಾಗುತ್ತಿದ್ದು ತೋರಣಗಲ್ಲಿನಲ್ಲಿ ಸಜ್ಜೆ ನವಣೆ ಬೇಡಿಕೆ ಹೆಚ್ಚಾದರೆ, ದರೋಜಿಯಲ್ಲಿ ಭತ್ತಕ್ಕೆ ಬೇಡಿಕೆ ಇದೆ, ರೈತರಿಗೆ ಪಿ.ಎಂ. ಕಿಸಾನ್ ಯೋಜನೆ ಅಡಿಯಲ್ಲಿ 14ನೇ ಕಂತಿನ ಅನುದಾನ ಬಿಡುಗಡೆಯಾಗಿದ್ದು 3250 ರೈತರು ಈ.ಕೆ.ವೈ.ಸಿ. ಇನ್ನೂ ನೊಂದಾವಣೆ ಮಾಡಿಸಿಕೊಂಡಿಲ್ಲ ಅದಷ್ಟು ಬೇಗನೆ ರೈತರು ನೊಂದಣೆ ಮಾಡಿಸಿಕೊಳ್ಳಲು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿಯವರು ಸಂಜೆವಾಣಿ ವರದಿಗಾರರ ಪ್ರಶ್ನೆಗಳಿಗೆ ಮೇಲಿನಂತೆ ಉತ್ತರಿಸುವುದರ ಜೊತೆಗೆ ವಿಚಾರ ವಿನಿಮಯವನ್ನು ಹಂಚಿಕೊಂಡರು.
ಅವರು ವರದಿಗಾರರ ಜೊತೆ ಮಾತನಡುತ್ತಾ ಈ ವಿಷಯವನ್ನು ತಿಳಿಸಿದಲ್ಲದೆ ಸಂಡೂರು ತಾಲೂಕಿನಲ್ಲಿ 273 ಮಿ.ಮೀ. ವಾಡಿಕೆಯಂತೆ ಮಳೆಯಾಗಬೇಕಾಗಿದ್ದು 123.6 ಮಿ.ಮೀ. ಮಳೆಯಾಗಿದ್ದು 54% ಮಳೆಯ ಕೊರತೆಯಿದೆ ಎಂದು ತಿಳಿಸಿದ್ದಾರೆ.
ಬಿತ್ತನೆಯ ಪ್ರಮಾಣ: ಸಂಡೂರು ತಾಲೂಕಿನಲ್ಲಿ 10.820 ಹೆ. ಬಿತ್ತನೆಯಾಗಿದ್ದು 8573 ಹೆ., ಭತ್ತ 184 ಹೆ. ಜೋಳ, 570, ರಾಗಿ 15ಹೆ. ತೊಗರಿ 48 ಹೆ.ಕ್ಟೆರ್ ಶೇಂಗಾ 460 ಹೆ. ಎಳ್ಳು 70 ಹೆ. ಸೂರ್ಯಕಾಂತಿ 32 ಹೆ. ಹತ್ತಿ 629 ಹೆ. ಬಿತ್ತನೆಯಾಗಿದ್ದು ಬಂಡ್ರಿ ಭಾಗದಲ್ಲಿ ಭತ್ತದ ಬಿತ್ತನೆ ಚುರುಕಾಗಿದ್ದು ದರೋಜಿ ಭಾಗದಲ್ಲಿಯೂ ಸಹ ಭತ್ತದ ಬೇಡಿಕೆ ಇದೆ ಎಂದು ವರದಿಗಾರರ ಪ್ರಶ್ನೆಗೆ ಉತ್ತಿರಿಸದರು.
ಹರಸಾಹಸ ಪಟ್ಟು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು: ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಸರರ್ಕಾರಿ ಶಾಲೆಗೆ ತೆರಳುವ ಸಾರ್ವಜನಿಕ ರಸ್ತೆಯಲ್ಲಿ ಜಿ.ಟಿ., ಜಿ.ಟಿ ಮಳೆಯಾಗುತ್ತಿದ್ದು ಮಳೆಯ ನೀರಿನೊಂದಿಗೆ ಚರಂಡಿ ನೀರು ಸೇರಿ ಹರಿಯುತ್ತಿದ್ದ ಶಾಲಾ ಮಕ್ಕಳು ಸಾರ್ವಜನಿಕರು ಹgಸಾ¸ಹಸ ಪಟ್ಟು ಸಂಚರಸಿಸುವ ದೃಶ್ಯ ಕಂಡು ಬರುತ್ತಿದೆ.
ತಾಲೂಕಿನ ತಾಲೂಕಿನ ಸುಶೀಲಾನಗರ ತಾಂಡದಲ್ಲಿ  ಶಂಕರನಾಯ್ಕ ತಂದೆ ಸಾನಿಯಾ ನಾಯ್ಕ ಅವರ ಮನೆ ಬಿದ್ದು ಇಡೀ ಕುಟುಂಬ ರಾತ್ರಿಯಲ್ಲ ಮಳೆಯಲ್ಲಿ ಇರುವಂತಹ ದುಸ್ಥಿತಿ ಉಂಟಾಗಿದೆ.