ಚೊಂಡಿಮುಖೇಡ ಗ್ರಾಮದಲ್ಲಿ ಪ್ರೌಢಶಾಲೆ ಮಂಜೂರು ಮಾಡುವಂತೆ ಕರವೇ ಆಗ್ರಹ

ಔರಾದ : ನ.19: ತಾಲೂಕಿನ ಮಹಾರಾಷ್ಟ್ರ ಗಡಿಭಾಗಲ್ಲಿರುವ ಚೊಂಡಿಮುಖೇಡ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದೆ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿ ಶಾಲೆ ಕಲಿಯುವ ಅನಿವಾರ್ಯ ನಿರ್ಮಾಣವಾಗಿರುವ ಹಿನ್ನಲೆ ಚೊಂಡಿಮುಖೇಡ್ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡಿ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಔರಾದ ಕರವೇ(ನಾರಾಯಣ ಗೌಡ ಬಣ) ಅಧ್ಯಕ್ಷ ಅನಿಲ ಹೇಡೆ ಆಗ್ರಹಿಸಿದರು.

ತಾಲೂಕಿನ ಗಡಿ ಭಾಗದಲ್ಲಿರುವ ಗ್ರಾಮಕ್ಕೆ ಸರಿಯಾದ ಸಾರಿಗೆ ಸಂಪರ್ಕವಿಲ್ಲ ಅಲ್ಲಿನ ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆ ಮುಗಿದ ನಂತರ ಪ್ರೌಢ ಶಾಲೆ ಇಲ್ಲದೆ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಹೋಗಿ ಶಿಕ್ಷಣ ಮಾಡುವ ಅನಿವಾರ್ಯತೆ ಉಂಟಾಗಿದೆ, ಹಿಂದಿ ಮತ್ತು ಮರಾಠಿ ಹೇರಿಕೆ ಇನ್ನಮುಂದೆ ಸಹಿಸಲಾಗುವುದಿಲ್ಲ,ಕೂಡಲೇ ಕನ್ನಡಿಗರಿಗೆ ಕನ್ನಡ ಶಾಲೆಯ ವ್ಯವಸ್ಥೆ ಮಾಡಿಕೊಡಬೇಕೆಂದು ಔರಾದ ತಹಸೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಸಂಘಟನೆಯ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ್ಣದಿಂದ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರವೇ ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಹಣಮಂತ ದೇಶಮುಖ, ಅಮಿತ್ ಶಿವಪೂಜೆ, ಸತೀಶ್ ಫುಲ್ಲಾರಿ, ಬಾಲಾಜಿ ದಾಮಾ,ಬಾಲಾಜಿ ಕಾಸಲೆ, ಹರಿದೇವ್ ಸಂಗನಾಳ, ಸಂದೀಪ್ ಮಾನೆ, ದತ್ತು ಬಾಪುರೇ, ಚಂದು ಡಿಕೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.